Share this news

ಮಂಗಳೂರು, ಅ.13: ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಚಲನಚಿತ್ರ ‘ಟೈಮ್ ಪಾಸ್’ ಅ.17ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಜೋಡಿದಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟೈಮ್ ಪಾಸ್ ಚಿತ್ರದ ಟ್ರೇಸ‌ರ್ ಮತ್ತು ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅ.17ರಂದು ಚಿತ್ರದ ಟ್ರೈಲರ್ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು. ಆಧುನಿಕ AI ತಂತ್ರಜ್ಞಾನ ಮತ್ತು ನುರಿತ ತಂತ್ರಜ್ಞರನ್ನು ಬಳಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು ಉತ್ತಮ ಗುಣಮಟ್ಟದದಲ್ಲಿ ಮೂಡಿಬಂದಿದೆ.ಹಾಸ್ಯ ಭರಿತವಾಗಿರುವ ಟೈಮ್ ಪಾಸ್ ಚಲನಚಿತ್ರವನ್ನು ಕುಟುಂಬದವರೆಲ್ಲರೂ ಸೇರಿಕೊಂಡು ವೀಕ್ಷಣೆ ಮಾಡಬಹುದು. ಜೀವನದ ನೈಜ ಕಥೆಗಳನ್ನು ಆಧರಿಸಿ ನಿರ್ಮಾಣಗೊಂಡಿರುವ ಈ ಚಿತ್ರ ಪ್ರೇಕ್ಷಕರಿಗೆ ನಿಜವಾಗಲೂ ‘ಟೈಮ್ ಪಾಸ್’ ಆಗಲಿದೆ ಎಂದರು.

ಪ್ರತಿಷ್ಠಿತ ಸರಿಗಮ ಕನ್ನಡ ಆಡಿಯೋ ಕಂಪನಿ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು,ಅದರ ಯೂ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳು ಲಭ್ಯವಿದೆ. ಡಾರ್ಕ್ ಹೂಮರ್ ಜನರಿಗೆ ಸೇರಿಕೊಳ್ಳುವ ಈ ಚಿತ್ರವನ್ನು ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಎಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ರತ್ಷಾರಾಮ್, ವೈಸಿರಿ ಕೆ.ಗೌಡ, ಕೆ. ಚೇತನ್ ಜೋಡಿದಾರ್, ಓಂ ಶ್ರೀಯಕ್ಷಶಿಫ್,ನವೀನ್ ಕುಮಾರ್,ಪ್ರಬಾಕರ್ ರಾವ್, ಸಂಪತ್ ಕುಮಾರ್,ಅಶ್ವಿನಿ ಶ್ರೀನಿವಾಸ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಗೌಡ ಅವರು ಸಾಹಸ ನಿರ್ದೇಶನ ಮಾಡಿದ್ದು, ವೈಷ್ಣವಿ ಸತ್ಯನಾರಾಯಣ್ ಅವರ ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಜೀವ್ ಗಣೇಶ್ ಅವರು ಛಾಯಾಗ್ರಹಣ ಹಾಗೂ ಹರಿ ಪರಮ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಡಿ.ಎಂ. ಉದಯ ಕುರ್ಮಾ ಅವರು ಸಂಗೀತ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ವಿತರಕರಾಗಿರುವ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಅವರನ್ನು ಚಿತ್ರತಂಡದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹ ನಿರ್ದೇಶಕಿ ವೈಷ್ಣವಿ ಸತ್ಯನಾರಾಯಣ್, ರಕ್ಷಾರಾಮ್, ಹಾಸ್ಯ ಕಲಾವಿದ ಓಂ ಶ್ರೀ ಯಕ್ಷಶಿಫ್, ಚಿತ್ರ ತಂಡದ ಜಿಲ್ಲಾ ಮಾಧ್ಯಮ ಸಲಹೆಗಾರ ಸೂರಜ್ ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *