
ಬೆಂಗಳೂರು,ಅ.25 : ಪ್ರೀತಿಸಿದ ಯುವತಿ ಮತಾಂತರಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಜೊತೆ ಮಜಾ ಉಡಾಯಿಸಿ ವಂಚಿಸಿ ಪರಾರಿಯಾಗಿದ್ದ ಅನ್ಯಕೋಮಿನ ಯುವಕನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಆರೋಪಿ ಮೊಹಮ್ಮದ್ ಇಶಾಕ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಪ್ರೀತಿಯ ನಾಟಕವಾಡಿ ಆಕೆಗೆ ಮತಾಂತರಕ್ಕೆ ಬಲವಂತ ಮಾಡಿ ಲವ್ ಜಿಹಾದ್ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.
ಕಳೆದ 2024ರ ಅಕ್ಟೋಬರ್ 17ರಂದು ಇನ್ಸ್ಟಾಗ್ರಾಂ ಮೂಲಕ ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಬಳಿಕ ಸ್ನೇಹವಾಗಿ ನಂತರ ಇವರಿಬ್ಬರ ನಡುವೆ ಪ್ರೀತಿಯಾಗಿ ಬದಲಾಯಿತು.ಇವರಿಬ್ಬರ ನಡುವೆ ಗಾಢವಾದ ಪ್ರೀತಿ ಹಾಗೂ ಸಲುಗೆ ಬೆಳೆದಿತ್ತು. ಯುವತಿಯ ಮಾತಿನಂತೆ ತಾನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ದಾಸರಹಳ್ಳಿ ಲಾಡ್ಜ್ ಗೆ ಕರೆದೊಯ್ದು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ.ನಂತರ ಪದೇಪದೇ ಆಕೆಯ ಜೊತೆ ಲೈಂಗಿಕ ಸಂಪರ್ಕ ಮಾಡುತ್ತಿದ್ದ. ಆರೋಪಿ ಇಶಾಕ್ ಬೇರೆ ಯುವತಿಯರ ಜೊತೆ ಕೂಡ ಪ್ರೀತಿಯ ನಾಟಕವಾಡಿ ಸಂಪರ್ಕ ಹೊಂದಿರುವ ವಿಚಾರ ಯುವತಿಗೆ ತಿಳಿದು ಆಕೆ ಆಕ್ಷೇಪಿದ್ದಳು.
ಈ ನಡುವೆ ಇಶಾಕ್ 2025ರ ಸೆ.14ರಂದು ಮುಸ್ಲಿಂ ಯುವತಿ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಪ್ರಶ್ನೆ ಮಾಡಿದಾಗ, ನಿನ್ನ ದಾರಿಯನ್ನು ನೀನು ನೋಡಿಕೋ ಎಂದು ಇಶಾಕ್ ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಪದೇಪದೇ ಕರೆ ಮಾಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.ಈ ಘಟನೆಯ ಬಳಿಕ ಒಂದು ದಿನ ಇಶಾಕ್‌ನ ಸೋದರ ಮತ್ತು ಬಾವ ಬಂದು ನನ್ನೊಂದಿಗೆ ಮಾತನಾಡಿ ಮತಾಂತರ ಆಗುವಂತೆ ಹೇಳಿದ್ದರು. ಮತಾಂತರವಾಗಲು 40 ದಿನ ಸಮಯ ಇರುತ್ತೆ. ನಮಾಜ್ ಮಾಡಲು ಕಲಿತುಕೊಳ್ಳಬೇಕು. ಮೊದಲು ಮತಾಂತರ ಆಗು, ಆನಂತರ ಮದುವೆ ಬಗ್ಗೆ ಮಾತನಾಡೋಣ ಎಂದಿದ್ದರು ಅಂತ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾಳೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.






