Share this news

ಕಾರ್ಕಳ, ಅ 25: ವಿಜಯ ಕುಮಾರ್ ಎಂದರೆ ಸಿದ್ಧಾಂತದ ಪ್ರತಿಪಾದಕ,ವಿಜಯ ಕುಮಾರ್ ಎಂದರೆ ಲವಲವಿಕೆ.ಇಂದು ಎಂ.ಕೆ ವಿಜಯ ಕುಮಾರ್ ನಮ್ಮ ನಡುವೆ ಇಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ಮಂಜುನಾಥ ಪೈ ಸಭಾ ಭವನದಲ್ಲಿ ಶನಿವಾರ ಕಾರ್ಕಳ ಬಿಜೆಪಿ ವತಿಯಿಂದ ನಡೆದ ಎಂ.ಕೆ ವಿಜಯಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ,ವೈಚಾರಿಕ ಬದ್ದತೆಯಿಂದ ಪಕ್ಷ ಸಂಘಟಿಸಿ ಕಾರ್ಕಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಕೀರ್ತಿ ಎಂ.ಕೆ ವಿಜಯಕುಮಾರ್ ಅವರಿಗೆ ಸಲ್ಲಬೇಕು.
ನಿರೂಪಕರು ಬಣ್ಣಿಸುವ ಹಿರಿಯ ಚೇತನ ಎನ್ನುವ ಪದಕ್ಕೂ ಅರ್ಹತೆ ಬೇಕು.ತಾನು ಮಾಡಿದ ಸಂಕಲ್ಪವನ್ನು ಸಾಧಿಸುವ ತನಕ ವಿರಮಿಸದೇ ಛಲದಿಂದ ಮುನ್ನಡೆಯವ ವ್ಯಕ್ತಿತ್ವದ ವ್ಯಕ್ತಿ ನಿಜವಾದ ಹಿರಿಯ ಚೇತನ. ವಿಜಯ ಕುಮಾರ್ ಅವರು ಸುಧೀರ್ಘ ಕಾಲ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಜಯಕುಮಾರ್ ಅವರ ಕೊಡುಗೆ ಅಪಾರ.ಇಂತಹ ಹಿರಿಯ ಮಹಾನ್ ಚೇತನವನ್ನು ಕಳೆದುಕೊಂಡಿರುವ ಬಿಜೆಪಿ ಹಾಗೂ ನಮಗೆಲ್ಲ ತುಂಬಲಾರದ ನಷ್ಟ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿ ನಮನ ಸಲ್ಲಿಸಿ, ಅತ್ಯಂತ ಕಷ್ಟಕಾಲದಲ್ಲಿ ಕೂಡ ಎದೆಗುಂದದೇ ಎಂ.ಕೆ ವಿಜಯ ಕುಮಾರ್ ಹಾಗೂ ಬೋಳ ಪ್ರಭಾಕರ ಕಾಮತ್ ಅವರು ಕಾರ್ಕಳದಲ್ಲಿ ಪಕ್ಷ ಸಂಘಟಿಸಿ ಕಾರ್ಕಳವನ್ನು ಬಿಜೆಪಿ ಭದ್ರಕೋಟೆ ಮಾಡಿದ್ದಾರೆ. ಪಕ್ಷದ ಸಂಘಟನೆ ಹಾಗೂ ಶ್ರಮದ ದುಡಿಮೆ ಬಿಟ್ಟು ವಿಜಯ ಕುಮಾರ್ ಎಂದಿಗೂ ಅಧಿಕಾರದ ಹಿಂದೆ ಬಿದ್ದವರಲ್ಲ. ಇಂತಹ ಮಹಾನ್ ಮುತ್ಸದ್ಧಿಯನ್ನು ಬಿಜೆಪಿ ಕಳೆದುಕೊಂಡಿರುವುದು ಅತ್ಯಂತ ದುಃಖದ ವಿಚಾರ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮಣಿರಾಜ ಶೆಟ್ಟಿ,ಬೋಳ‌ ಪ್ರಭಾಕರ ಕಾಮತ್,ಬಿಜೆಪಿ ಸಹ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕುತ್ಯಾರು ನವೀನ್ ಶೆಟ್ಟಿ,ಉಡುಪಿ ಶಾಸಕ ಯಶಪಾಲ ಸುವರ್ಣ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಮುಂತಾದವರು ನುಡಿನಮನ ಸಲ್ಲಿಸಿದರು.
ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ಕೆ ವಿಜಯಕುಮಾರ್ ಅವರು ಅತ್ಯಂತ ಸಂದಿಗ್ಧ ಕಾಲದಲ್ಲಿ ಕೂಡ ಪಕ್ಷವನ್ನು ಕಟ್ಟಿದ ಕುರಿತು ಅತ್ಯಂತ ಸ್ಥೂಲವಾಗಿ ವಿವರಿಸಿದರು.
ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *