
ಉಡುಪಿ, ಅ.31: ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ 16 ಸಾಧಕರು ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಮಂದಿ ಸಾಧಕರು ಹಾಗೂ 13 ಸಂಘ ಸಂಸ್ಥೆಗಳಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಾರ್ಕಳ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಪಟ್ಟಿ:
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯ ಬಿಪಿನ್ ಚಂದ್ರಪಾಲ್( ಸಾಹಿತ್ಯ ಮತ್ತು ಸಮಾಜ ಸೇವೆ) ಕಡೆಕುಂಜ ನವೀನ್ ಎಂ ಪೂಜಾರಿ(ಸಮಾಜ ಸೇವೆ), ಬೆಳ್ಮಣ್ ಗ್ರಾಮದ ಶ್ರೀಧರ್ ಭಟ್(ದೇವಾರಾಧನೆ),ಕಾರ್ಕಳದ ಅನಂತಶಯನ ದೇವಸ್ಥಾನ ಬಳಿಯ ನಿವಾಸಿ ಪಾಂಡು ದೇವಾಡಿಗ(ಸಂಗೀತ, ವಾದ್ಯ, ಸ್ಯಾಕ್ಸೋಫೋನ್), ಬೆಳ್ಮಣ್ ಗ್ರಾಮದ ಶಿವಗಿರಿ ನಗರದ ಮರಲೀಧರ ಜೋಗಿ (ವಿವಿಧ ಕಲಾಕ್ಷೇತ್ರ ಪ್ರೋತ್ಸಾಹ),ಬೈಲೂರು ಗ್ರಾಮದ ಕೌಡೂರಿನ ಬೂಬ ಪರವ(ದೈವಾರಾಧನೆ), ಪಳ್ಳಿ ಗ್ರಾಮದ ಗುರುಪ್ರಸಾದ್ ಭಟ್( ದೇವರ ನರ್ತನ),ಬೋಳ ಗ್ರಾಮದ ಬೈಲಬೆಟ್ಟು ನಿವಾಸಿ ಅಮಿತಾ( ಸಂಗೀತ) ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇದಲ್ಲದೇ ಸಂಘ ಸಂಸ್ಥೆಗಳ ಪೈಕಿ ಕಾರ್ಕಳ ತಾಲೂಕಿನ ಪೊಸ್ರಾಲು ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ(ಯಕ್ಷಗಾನ ಕ್ಷೇತ್ರ) ಆಯ್ಕೆಯಾಗಿದೆ.
ಹೆಬ್ರಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಪಟ್ಟಿ:
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ವೈ.ಕುಮಾರಸ್ವಾಮಿ(ಕ್ರೀಡೆ), ಶಿವಪುರ ಗ್ರಾಮದ ಡಾ.ಗೋಪಾಲ ಪೂಜಾರಿ( ವೈದ್ಯಕೀಯ), ವರಂಗ ಗ್ರಾಮದ ವೀಣಾ ,ಆರ್ ಭಟ್(ಸಮಾಜಸೇವೆ), ವರಂಗ ಗ್ರಾಮದ ಪಡುಕುಡೂರಿನ ಶಂಕರ ಶೆಟ್ಟಿ( ಸಮಾಜಸೇವೆ), ಚಾರಾ ಗ್ರಾಮದ ಪ್ರದೀಪ್ ಹೆಬ್ಬಾರ್(ಯಕ್ಷಗಾನ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಘ ಸಂಸ್ಥೆಗಳ ಪೈಕಿ ಹೆಬ್ಬೇರಿ ಉತ್ಸವ ನಡೆಸಿ ವಿವಿಧ ಕ್ಷೇತ್ರಗಳ ನೂರಾರು ಮಂದಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿರುವ ಹೆಬ್ರಿಯ ಅನಂತಪದ್ಮನಾಭ ಫ್ರೆಂಡ್ಸ್(ರಿ) ಹಾಗೂ ಅಲ್ಬಾಡಿ ಗ್ರಾಮದ ಆರ್ಡಿ ಕೊಂಜಾಡಿ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ (ಧಾರ್ಮಿಕ ಸೇವೆ) ಈ ಬಾರಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಜಿಲ್ಲೆಯ ಎಲ್ಲಾ ಸಾಧಕರ ಪಟ್ಟಿ ಈ ಕೆಳಗಿನಂತಿದೆ




