Share this news

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2ನೇ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜನಿಟ ವೆಲಿಕ ಡಿಸೋಜ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಬೆಂಗಳೂರಿನಲ್ಲಿ ನವೆಂಬರ್ 5ರಿಂದ 8ರವರೆಗೆ ಆಯೋಜಿಸಿದ್ದ 41ನೇ ಕರ್ನಾಟಕ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಮತ್ತು ಆಯ್ಕೆ ಪರೀಕ್ಷೆ (2025–26)ಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು, ನಿಟ್ಟೆ ಸಂಸ್ಥೆಗೆ ಹಾಗೂ ಉಡುಪಿ ಕರಾವಳಿ ರೋಲರ್ ಸ್ಕೇಟಿಂಗ್ ಕ್ಲಬ್‌ಗೆ ಕೀರ್ತಿ ತಂದಿದ್ದಾರೆ.

18 ವರ್ಷ ಮೇಲ್ಪಟ್ಟವರ ವಿಭಾಗದ ಸ್ಪೀಡ್ ಕ್ವಾಡ್ ಸ್ಪರ್ಧೆಯಲ್ಲಿ ಜನಿಟ ಅವರ ಅದ್ಭುತ ಪ್ರದರ್ಶನವು ಅವರಿಗೆ ಉನ್ನತ ಗೌರವಗಳನ್ನು ತಂದುಕೊಟ್ಟಿರುವುದಷ್ಟೇ ಅಲ್ಲದೆ, ಮುಂದಿನ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನೂ ಒದಗಿಸಿದೆ.

ಇವರು ಉಡುಪಿಯ ಆಗ್ನೆಲ್ಲೊ ಡಿಸೋಜ ಹಾಗೂ ಶ್ರೀಮತಿ ಜೆಸಿಂತಾ ರೋಜ್ ಡಿಸೋಜರವರ ಪುತ್ರಿಯಾಗಿರುತ್ತಾರೆ. ಮನೀಶ್ ಬಂಗೇರ ಮತ್ತು ಕಿಶೋರ್ ಕುಮಾರ್ ಇವರಿಗೆ ಮಾರ್ಗದರ್ಶನ ನೀಡಿರುತ್ತಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *