
ಕಾರ್ಕಳ, ನ,12: ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರಿಯ ರೈಸ್ ಮಿಲ್ ನಲ್ಲಿ ಲಾರಿ ಚಾಲಕನಾಗಿ ದುಡಿಯುತ್ತಿದ್ದ ಕೇವಲ 29ರ ಹರೆಯದ ಯುವಕ ಮಲಗಿದ್ದಲ್ಲೇ ತೀವೃ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಮೂಲದ ಸದಾನಂದ (29) ಎಂಬವರು ತೀವೃ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಮುಂಜಾನೆ 5 ಗಂಟೆಗೆ ಅಕ್ಕಿ ಸಾಗಾಟ ಮಾಡುವ ಲಾರಿಗೆ ಚಾಲಕನಾಗಿ ಹೋಗಬೇಕಿದ್ದ ಸದಾನಂದ ಅವರು ಲಾರಿಗೆ ಅಕ್ಕಿ ಲೋಡ್ ಆಗಿದ್ದರೂ ಎದ್ದು ಬರದ ಹಿನ್ನಲೆಯಲ್ಲಿ ಕಾರ್ಮಿಕರು ಎಬ್ಬಿಸಲು ಹೋದಾಗ ಸದಾನಂದ ಅದಾಗಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಗಾಢ ನಿದ್ದೆಯಲ್ಲಿರುವಾಗಲೇ ತೀವೃ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತ ಸದಾನಂದ ಕಳೆದ ಒಂದು ತಿಂಗಳಿನಿAದ ಎದೆನೋವು ಕಾಣಿಸಿಕೊಂಡ ಕಾರಣದಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಇದೀಗ ಕೇವಲ 29ರ ಹರೆಯದಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದು ದುರಂತ.ಅಜೆಕಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
ಒತ್ತಡದ ಜೀವನ, ಆಹಾರ ಕ್ರಮದಲ್ಲಿ ವ್ಯತ್ಯಾಸ, ಜಂಕ್ ಫುಡ್ ಜನರ ಆರೋಗ್ಯ ಕೆಡಿಸುತ್ತಿದೆ:
ಇಂದಿನ ಒತ್ತಡದ ಜೀವನದಲ್ಲಿ ಜನರು ನಿಯಮಿತವಾಗಿ ಆಹಾರ ಸೇವನೆ ಮಾಡದಿರುವುದು ಹಾಗೂ ಅತಿಯಾದ ಕೆಮಿಕಲ್ ಬಳಕೆಯ ಆಹಾರ ಪದಾರ್ಥ, ಕಳಪೆ ಗುಣಮಟ್ಟದ ಕರಿದ ತಿಂಡಿಗಳು, ಫಾಸ್ಟ್ ಫುಡ್, ತಂಪು ಪಾನೀಯಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇದರ ಜೊತೆಗೆ ಸರಿಯಾದ ವ್ಯಾಯಾಮ ಪ್ರಾಣಾಯಾಮ ಇಲ್ಲದಿರುವುದು ಕೂಡ ಆರೋಗ್ಯ ಹದಗೆಡಲು ಕಾರಣ ಎನ್ನುವ ವಿಚಾರ ಸಾಕಷ್ಟು ವೈದ್ಯಕೀಯ ವರದಿಗಳಲ್ಲಿ ಸಾಬೀತಾಗಿದೆ

