
ಕಾರ್ಕಳ : ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ ಸಾಣೂರು ಇಲ್ಲಿ ನಡೆದ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆ ಅಜೆಕಾರು ಇಲ್ಲಿಯ ಬಾಲಕ ಬಾಲಕಿಯರ ಎರಡು ತಂಡಗಳು ಪ್ರಥಮ ಸ್ಥಾನ ಪಡೆದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಥ್ರೋ ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದರೆ.
ವಿಜಯಶಾಲಿ ತಂಡಕ್ಕೆ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ
ಸಂಚಾಲಕರಾದ ವಂದನಿಯ ಗುರು ಹೆನ್ರಿ ಮಾಸ್ಕರೆನ್ಹಸ್
ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯ ಶಿಕ್ಷಕಿ ರೇಷ್ಮಾ ಶೀಲಾ ರೋಡ್ರಿಗಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಸುಶಾಂತ್, ತರಬೇತುದಾರ ಜುನೈದ್ ಹಾಗೂ ಹಳೆವಿದ್ಯಾರ್ಥಿ ಪ್ರಣೀತ್, ಪೋಷಕರಾದ ರಾಮಪ್ಪ, ಶ್ರೀಮತಿ ರೇಷ್ಮಾ ಹಾಗೂ ನಜೀರ್ ಶಾ ಕ್ರೀಡಾಳುಗಳೊಂದಿಗಿದ್ದು ಸಹಕರಿಸಿದ್ದು, ಶಿಕ್ಷಕ – ಶಿಕ್ಷಕೇತರ ವರ್ಗದವರು, ಪೋಷಕ ಪ್ರತಿನಿಧಿ ಹಾಗೂ ಪೋಷಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

