
ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆಯ ಕಟ್ಟಿಮಾರ್ ಎಂಬಲ್ಲಿ ಹಸುವಿನ ಹಗ್ಗ ಕತ್ತರಿಸಿದ್ದನ್ನು ಪ್ರಶ್ನೆ ಮಾಡಿದ ವ್ಯಕ್ತಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನ.13 ರಂದು ನಡೆದಿದೆ.
ಜಗದೀಶ್ ಎಂಬವರು ತಮ್ಮ ಮನೆಯ ಎರಡು ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಿ, ಪಕ್ಕದಲ್ಲಿ ಭತ್ತ ಕಟಾವು ಮಾಡುತ್ತಿದ್ದರು. ಆ ವೇಳೆ ನೆರೆಮನೆಯ ಹೇಮರಾಜ್ ಶೆಟ್ಟಿ ಎಂಬವರು ಕತ್ತಿಯಿಂದ ದನ ಕಟ್ಟಿ ಹಾಕಿದ್ದ ಹಗ್ಗವನ್ನು ಕತ್ತರಿಸಿದಾಗ ಜಗದೀಶ್ ಅವರು ನೀವು ಯಾಕೆ ತಾನು ಕಟ್ಟಿದ ದನದ ಹಗ್ಗವನ್ನು ಬಿಡಿಸಿದ್ದಿರಿ ಎಂದು ವಿಚಾರಿಸಿದಾಗ ಹೇಮರಾಜ್ ಶೆಟ್ಟಿ ಆತನ ಕೈಯಲ್ಲಿದ್ದ ಕತ್ತಿಯಿಂದ ಬೀಸಿದ್ದ ಪರಿಣಾಮ ಜಗದೀಶ್ ಗಾಯಗೊಂಡಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

