
ಕಾರ್ಕಳ: ಭೂತಾನ್ ನ ಥಿಂಪು ನಗರದಲ್ಲಿ ನಡೆದ SBKF ನ 12ನೇ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕಾರ್ಕಳ ತಾಲೂಕು ಅಜೆಕಾರಿನ ವಿಜೇತ ವಿದ್ಯಾ ಪೈ ಅವರು ಈಜು ಸ್ಪರ್ಧೆ 25 ಮೀಟರ್ ನಲ್ಲಿ ಚಿನ್ನ, ಬ್ರೆಸ್ಟ್ರೋಕ್‌ನಲ್ಲಿ 50 ಮೀಟರ್ ನಲ್ಲಿ ಚಿನ್ನ ಹಾಗೂ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಈಗಾಗಲೇ ಹಲವು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಿ ಪದಕಗಳನ್ನು ಪಡೆದಿರುವ ವಿಜೇತಾ ವಿದ್ಯಾ ಪೈ ಅವರು SBKF ನ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆಗೈದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

