
ಹೆಬ್ರಿ, ನ.19: ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಕಳೆದ 1969ರಲ್ಲಿ ಪ್ರಾರಂಭವಾದ ಸಿಂಡಿಕೇಟ್ ಬ್ಯಾಂಕ್ ಶಾಖೆಯು ಸುಮಾರು 56 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸುತ್ತ ಬಂದಿದ್ದು, ಇತ್ತೀಚಿಗೆ ಬ್ಯಾಂಕನ್ನು ಕೆನರಾ ಬ್ಯಾಂಕಿಗೆ ವಿಲೀನಗೊಳಿಸಲಾಗಿದೆ. ಇದೀಗ ಶಾಖೆಯನ್ನು ನವೀಕರಿಸಿದ್ದು, ಹವಾನಿಯಂತ್ರಣ ನವೀಕರಿಸಿದ ಶಾಖೆಯನ್ನು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಶ್ರೀಧರ್ ಪೈ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಡಿ. ಜಿ. ಎಮ್ ರಾಮ ಮೂರ್ತಿ ಉಪಸ್ಥಿತರಿದ್ದರು.
ಶಾಖೆಯ ಕಟ್ಟಡ ಮಾಲಕರಾದ ಎಮ್. ದಿನೇಶ್ ಪೈ, ಕಡ್ತಲ ತಿರುಮಲ ಕ್ಯಾಶ್ಯೂಸ್ ಮಾಲಕರಾದ ಯೋಗೀಶ್ ಮಲ್ಯ, ವರಂಗ ಮಂಗಳ ಕ್ಯಾಶ್ಯೂಸ್ ಮಾಲಕರಾದ ನರಸಿಂಹ ಮಲ್ಯ,ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾoಶುಪಾಲರಾದ ಶ್ರೀಮತಿ ಬೇಬಿ ಶೆಟ್ಟಿ ಹಾಗೂ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೆನರಾ ಬ್ಯಾಂಕ್ ಸ್ಥಾಪಕರಾದ ಶ್ರೀ ಅಮ್ಮೆoಬಳ ಸುಬ್ಬರಾವ್ ಪೈ ಇವರ 173 ನೇ ಹುಟ್ಟುಹಬ್ಬವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಶಾಖಾ ಪ್ರಭಂದಕರಾದ ಅಶೋಕ್ ಟಿ. ಜಿ ಸ್ವಾಗತಿಸಿ, ಶಾಖಾ ಸಿಬ್ಬಂದಿ ಕುಮಾರಿ ಪದ್ಮಶ್ರೀ ವಂದಿಸಿದರು.

