Share this news

 

 

ನವದೆಹಲಿ, ನ.22: ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆಯಲ್ಲಿ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಉಗ್ರ ಮುಜಮ್ಮಿಲ್ 6.5 ಲಕ್ಷ ರೂ. ಕೊಟ್ಟು AK-47 ಖರೀದಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಮುಜಮ್ಮಿಲ್ ಹ್ಯಾಂಡ್ಲರ್ ಮನ್ಸೂರ್ ಮತ್ತು ಉಮರ್ ಹ್ಯಾಂಡ್ಲರ್ ಹಾಶಿಮ್ ಇಬ್ಬರೂ ಇಬ್ರಾಹಿಂ ಎಂಬ ವ್ಯಕ್ತಿಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. 2022 ರಲ್ಲಿ, ಮುಜಮ್ಮಿಲ್, ಆದಿಲ್ ಮತ್ತು ಮುಜಫರ್ ಒಕಾಸಾ ಸೂಚನೆಯ ಮೇರೆಗೆ ಟರ್ಕಿಗೆ ಪ್ರಯಾಣ ಬೆಳೆಸಿದ್ದರು.

ಅಲ್ಲಿ, ಅವರು ಅಫ್ಘಾನಿಸ್ತಾನಕ್ಕೆ ಕಳುಹಿಸುವ ವ್ಯಕ್ತಿಯನ್ನು ಭೇಟಿಯಾಗಬೇಕಿತ್ತು, ಆದರೆ ಐದು ಅಥವಾ ಆರು ದಿನಗಳ ನಂತರ, ಅವರನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದರು. ಉಮರ್ ಬಾಂಬ್ ತಯಾರಿಸುವ ವೀಡಿಯೊಗಳನ್ನು ಇಂಟರ್​ನೆಟ್​ನಲ್ಲಿ ನೋಡುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.

ವಿಶ್ವವಿದ್ಯಾನಿಲಯದೊಳಗೆ ಹಣದ ವಿಚಾರದಲ್ಲಿ ಮುಜಮ್ಮಿಲ್ ಮತ್ತು ಉಮರ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಇದಕ್ಕೆ ಹಲವಾರು ಜನರು ಸಾಕ್ಷಿಯಾಗಿದ್ದರು.ಉಮರ್ ತನ್ನ ಕೆಂಪು ಇಕೋ ಕಾರನ್ನು ಸ್ಫೋಟಕಗಳೊಂದಿಗೆ ಮುಜಮ್ಮಿಲ್‌ಗೆ ನೀಡಿದ್ದ. ಉಮರ್ ಸ್ಫೋಟಕಗಳು ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಲು ಡೀಪ್ ಫ್ರೀಜರ್ ಖರೀದಿಸಿದ್ದ ಮತ್ತು ಅದರೊಳಗೆ ರಾಸಾಯನಿಕ ಬಾಂಬ್ ಸಿದ್ಧಪಡಿಸುತ್ತಿದ್ದ. ಸ್ಫೋಟಕಗಳನ್ನು ಸಂಗ್ರಹಿಸಿ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಫೋಟಿಸುವುದು ಅವರ ಯೋಜನೆಯಾಗಿತ್ತು.

ನವೆಂಬರ್ 10, 2025 ರಂದು ದೆಹಲಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯನ್ನು ಡಾ. ಉಮರ್ ಎಂಬ ಆತ್ಮಹತ್ಯಾ ಬಾಂಬರ್ ಈ ಕೃತ್ಯವೆಸಗಿದ್ದ.ಆ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಈ ಘಟನೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿತ್ತು.

    

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *