Share this news

 

 

 

 

ಬೆಂಗಳೂರು, ನ,26 : ಪರಪ್ಪನ ಅಗ್ರಹಾರ ಜೈಲಿನೊಳಗೆ ಖೈದಿಗಳು ಮದ್ಯ, ಬೀಡಿ, ಸಿಗರೇಟು ಸೇದಿಕೊಂಡು ಬಿಂದಾಸ್ ಆಗಿ ಜೀವನ ನಡೆಸುತ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಜೈಲಿನಲ್ಲಿರುವ ಖೈದಿಗಳಿಗಾಗಿ ಜೈಲಿನೊಳಗೆ ಮದ್ಯ ತಯಾರಿಸುವ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಬಂದಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ ಕಳ್ಳಭಟ್ಟಿ ತಯಾರಿಕೆ ಕೇಸ್ ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಖೈದಿಗಳೇ ಜೈಲಿನೊಳಗೆ ಮದ್ಯ ತಯಾರಿಕೆಯ ಲೀಡರ್ ಆಗಿದ್ದಾರೆ ಎನ್ನುವ ಸ್ಪೋಟಕ ವಿಚಾರ ಬಯಲಾಗಿದೆ.
ಕೊಳೆತ ದ್ರಾಕ್ಷಿ ಮತ್ತು ಸೇಬು, ರಾಶಿ ರಾಶಿ ಹಣ್ಣುಗಳು ಚಕ್ಕೆ, ಗೋಧಿ ಸಕ್ಕರೆ ಮುಂತಾದ ಪದಾರ್ಥಗಳನ್ನು ಖೈದಿಗಳು ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆ. ಕಳ್ಳಭಟ್ಟಿ ತಯಾರಿಕೆಗೆ ಖೈದಿಗಳ ಒಂದೊAದು ತಂಡ ಪ್ಲಾನ್ ಮಾಡಿದ್ದು, ಒಂದು ತಂಡ ಕೊಳೆತ ಹಣ್ಣು ಸಂಗ್ರಹ ಮಾಡುತ್ತದೆ. ಮತ್ತೊಂದು ತಂಡ ಜೈಲಿನ ಬೇಕರಿಯಿಂದ ಈಸ್ಟ್ ತಂದು ಎಲ್ಲಾ ಐಟಂಗಳು ಮಿಕ್ಸ್ ಮಾಡಿ ಒಂದು ಕಡೆ ಇಡುತ್ತಿದ್ದರು. ಎಲ್ಲಾ ತಯಾರಾದ ಮೇಲೆ ಕಳ್ಳ ಭಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜೈಲು ಎಂದರೆ ಅಪರಾಧಿಗಳು ತಾವು ಮಾಡಿದ ಅಪರಾಧ ಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಖೈದಿಗಳು ಜೈಲು ಶಿಕ್ಷೆಯ ಬಳಿಕ ಮನ ಪರಿವರ್ತನೆಯಾಗಿ ಉತ್ತಮ ನಾಗರಿಕರಾಗಿ ಜೀವನ ನಡೆಸಬೇಕೆಂಬ ನಿಟ್ಟಿನಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತದೆ. ಆದರೆ ಜೈಲು ಸಿಬ್ಬಂದಿಗಳ ಲಂಚಬಾಕತನಕ್ಕೆ ಜೈಲಿನಲ್ಲಿ ಬಿಂದಾಸ್ ಜೀವನ ನಡೆಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಖೈದಿಗಳು ಮತ್ತೆಮತ್ತೆ ಅಪರಾಧ ಕೃತ್ಯ ಎಸಗಲು ಉತ್ತೇಜಿಸುವ ಸಾಧ್ಯತೆಗಳಿವೆ.
ಜೈಲಿನೊಳಗೆ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಸ್ವತಃ ಜೈಲು ಅಧಿಕಾರಿಗಳೇ ಸುಮ್ಮನಿದ್ದಾರೆ ಎಂದರೆ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಎಂಬAತಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿ ಸೇವೆಯಿಂದ ವಜಾ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *