
ಕಾರ್ಕಳ,ಡಿ.11: ಕಾರ್ಕಳ ಪುಲ್ಕೇರಿಯಲ್ಲಿರುವ ಹಳೆಯ ಅಲ್ಯೂಮಿನಿಯಂ, ತಾಮ್ರ ಹಾಗೂ ಇನ್ನಿತರ ಹಳೆಯ ಸಾಮಾಗ್ರಿಗಳನ್ನು ಖರೀದಿ ಮಾಡುವ ಗೋಬ್ಲಲ್ ಸ್ಟಾರ್‌ಸ್ ಇಂಡ್‌ಮೆಟಲ್ ಪ್ರೈ.ಲಿಮಿಟೆಡ್ ಕಂಪೆನಿಗೆ ಕೇರಳದ ಕಂಪೆನಿಯೊAದು ಕೋಟ್ಯಾಂತರ ರೂ. ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ನ್ಯಾಯಾಲಯದ ಖಾಸಗಿ ದೂರಿನ ಹಿನ್ನಲೆಯಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನಿಲ್ ಕುಮಾರ್ ಅವರು ಗೋಬ್ಲಲ್ ಸ್ಟಾರ್‌ಸ್ ಇಂಡ್‌ಮೆಟಲ್ ಪ್ರೈ.ಲಿಮಿಟೆಡ್ ಕಂಪೆನಿಯ ನಿರ್ದೇಶಕರಾಗಿದ್ದು ಕಳೆದ 2014ರ ಆಗಸ್ಟ್ 1 ರಂದು ಕೇರಳದ ಕಾಂಞಕಾಡ್‌ನ ಅಣ್ಣಾಮ್ ಸ್ಟೀಲ್ಸ್ ಪ್ರೈ ಲಿಮಿಟೆಡ್ ಕಂಪೆನಿಯ ಫಿರೋಜ್ ಇ.ಟಿ , ಕಲಾಯತ್ ನೂರ್ ಮಹಮ್ಮದ್ ನೂರೀಸ್ ,ಚಿಲೈಯ್ ವಿಜಯ ಕುಮಾರ್ ಇವರೊಂದಿಗೆ 11,50, 00, 000 ರೂ. ಮೌಲ್ಯದ ಹಳೆಯ ಸಾಮಾಗ್ರಿಗಳನ್ನು ಖರೀದಿಸುವ ಬಗ್ಗೆ ಕರಾರು ಪತ್ರ ಮಾಡಿಕೊಂಡಿದ್ದರು. ಆ ಬಳಿಕ ಅಣ್ಣಾಮ್ ಸ್ಟೀಲ್ಸ್ ಪ್ರೈ ಲಿಮಿಟೆಡ್ ಕಂಪನಿಯು ಗೋಬ್ಲಲ್ ಸ್ಟಾರ್‌ಸ್ ಇಂಡ್‌ಮೆಟಲ್ ಪ್ರೈ.ಲಿಮಿಟೆಡ್ ಕಂಪೆನಿಗೆ ರೂ. 3,38,85000 ರೂ. ಮೌಲ್ಯದ ಸಾಮಾಗ್ರಿಗಳನ್ನು ನೀಡಿತ್ತು, ಆದರೆ ಉಳಿದ ಹಣಕ್ಕೆ ಸಾಮಾಗ್ರಿಗಳನ್ನು ನೀಡಿರಲಿಲ್ಲ. ಆದ್ದರಿಂದ ಅಣ್ಣಾಮ್ ಸ್ಟೀಲ್ಸ್ ಪ್ರೈ ಲಿಮಿಟೆಡ್ ಕಂಪೆನಿ ಈ ಹಿಂದೆ ಮಾಡಿಕೊಂಡಿದ್ದ ಕರಾರು ಪತ್ರವನ್ನು ರದ್ದು ಮಾಡಿ ಉಳಿದ ಹಣ ಹಾಗೂ ಅದಕ್ಕೆ ಬಡ್ಡಿ ಸೇರಿ ಒಟ್ಟು 9,63,83,000 ರೂ. ಮೊತ್ತಕ್ಕೆ ಕರೂರು ವೈಶ್ಯ ಬ್ಯಾಂಕ್ ಕಾಂಞ್ಞಗಾಡ್ ಶಾಖೆಯ ಬ್ಯಾಂಕ್ ಚೆಕ್ ನೀಡಿದ್ದರು. ಆದರೆ ಖಾತೆಯಲ್ಲಿ ಹಣವಿಲ್ಲದ ಕಾರಣದಿಂದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನಲೆಯಲ್ಲಿ ಗೋಬ್ಲಲ್ ಸ್ಟಾರ್‌ಸ್ ಇಂಡ್‌ಮೆಟಲ್ ಪ್ರೈ.ಲಿಮಿಟೆಡ್ ಕಂಪೆನಿಯ ಮಾಲೀಕ ಸುನಿಲ್ ಕುಮಾರ್ ಅವರು ಕೇರಳದ ಅಣ್ಣಾಮ್ ಸ್ಟೀಲ್ಸ್ ಪ್ರೈ ಲಿಮಿಟೆಡ್ ಕಂಪೆನಿಯು ಹಳೆಯ ಸಾಮಾಗ್ರಿಗಳನ್ನು ನೀಡುವುದಾಗಿ ನಂಬಿಸಿ ತನ್ನ ಒಡೆತನದ ಕಂಪೆನಿಗೆ ಒಟ್ಟು 9.63,83,000 ಕೋಟಿ ರೂ. ವಂಚನೆ ಎಸಗಿರುವುದಾಗಿ ಸುನಿಲ್ ಕುಮಾರ್ ಕಾರ್ಕಳ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
