
ಕಾರ್ಕಳ,ಡಿ.12: ಭಾರತೀಯ ಸೇನೆಯಲ್ಲಿ ತನ್ನೆಲ್ಲ ಯೌವ್ವನದ ದಿನಗಳನ್ನು ತಾಯಿ ಭಾರತಾಂಬೆಯ ಸೇವೆಗೆ ಸಮರ್ಪಿಸಿ, 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತಾಯ್ನಾಡಿಗೆ ಆಗಮಿಸುತ್ತಿರುವ ಕಾರ್ಕಳ ತಾಲೂಕಿನ ವೀರ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಕಾರ್ಕಳದ ದೇಶಭಕ್ತರ ವೇದಿಕೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಡಿ.14 ಆದಿತ್ಯವಾರ ಸಂಜೆ 4 ಗಂಟೆಗೆ ನಡೆಯಲಿದೆ.
ಬೆಳ್ಮ ಣ್ ಪೇಟೆಯಿಂದ ಕಾರ್ಕಳ ಕುಕ್ಕುಂದೂರು ಅಯ್ಯಪ್ಪ ನಗರದವರೆಗೆ ಬೃಹತ್ ವಾಹನ ಜಾಥಾ, ಬಳಿಕ ಸಂಜೆ 5.30ಕ್ಕೆ ವಿಜೇತ ವಿಶೇಷ ಶಾಲೆ ಕ್ರೀಡಾಂಗಣ ಅಯ್ಯಪ್ಪ ನಗರ ಕುಕ್ಕುಂದೂರಿನಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ.
ಶ್ರೀಕಾಂತ್ ಶೆಟ್ಟಿ ಕಾರ್ಕಳ “ದೇಶಭಕ್ತಿಯ ಮಾತುಗಳು” ನಡೆಯಲಿದ್ದು, 6.30 ರಿಂದ ತುಳು ನಾಟಕ ರಂಗದಲ್ಲಿ ಇತಿಹಾಸ ನಿರ್ಮಿಸಿದ ನಾಟಕ “ಶಿವದೂತೆ ಗುಳಿಗೆ” ಪ್ರದರ್ಶನ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದೇಶಭಕ್ತರ ವೇದಿಕೆ ಪ್ರಕಟಣೆ ತಿಳಿಸಿದೆ.
.
.
