
ಹೆಬ್ರಿ, ಆ.08: ಹೆಬ್ರಿ ತಾಲೂಕಿನಲ್ಲಿ ಸಂಜೀವಿನಿ ಒಕ್ಕೂಟ ಸ್ವಸಹಾಯ ಸಂಘದ ಸದಸ್ಯರು ಸಾಲ ಮರುಪಾವತಿ ಮಾಡಿದ ಹಣವನ್ನು ಸಿಬ್ಬಂದಿ ಖಾತೆಗೆ ಜಮಾ ಮಾಡದೆ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನAದಿನಿ ಎಂಬವರು 8 ವರ್ಷದಿಂದ ಧನ ಲಕ್ಷ್ಮೀ ಸಂಜಿವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಮುಖ್ಯ ಪುಸ್ತಕ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು 2020 ರಿಂದ 2026 ರವರೆಗೆ ಧನ ಲಕ್ಷ್ಮೀ ಸಂಜಿವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸದಸ್ಯತ್ವ ಹೊಂದಿರುವ ವಿವಿದ ಸ್ವ ಸಹಾಯ ಸಂಘದ ಸದಸ್ಯರುಗಳು ಪಡೆದುಕೊಂಡ ಸಾಲವನ್ನು ಒಕ್ಕೂಟಕ್ಕೆ ಮರು ಪಾವತಿ ಮಾಡಿದ್ದರೂ ಕೂಡ ಸಾಲದ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡದೆ ಎರಡೆರಡು ಖಾತೆ ಪುಸ್ತಕಗಳನ್ನು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಣೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶೀರವರ ನಕಲಿ ಸಹಿಗಳನ್ನು ಮಾಡಿ ಒಟ್ಟು 28,19,489 ರೂ. ಮೊತ್ತವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಎಸಗಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಹೆಬ್ರಿ ತಾಲೂಕು ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಉಮಾ ಅವರು ದೂರು ನೀಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
