

ಕಾರ್ಕಳ, ಸೆ.24: ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಲ್ಲೊಟ್ಟೆ-ಪತ್ತೊಂಜಿಕಟ್ಟೆ ಬಳಿ ವಾಣಿಜ್ಯ ಸಂಕೀರ್ಣದ ಕಟ್ಟದಲ್ಲಿ ಸಾಗರ್ ಎಂಬಾತ ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಎನ್ನುವ ಖಚಿತ ಮಾಹಿತಿ ಪಡೆದ ಕಾರ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಆತನಿಂದ 3440 ರೂ ನಗದು ವಶಪಡಿಸಿಕೊಂಡಿದ್ದಾರೆ. ಸಾಗರ್ ಕಳೆದ ಹಲವು ಸಮಯದಿಂದ ಮಟ್ಕಾ ದಂಧೆ ನಡೆಸುತ್ತಿದ್ದ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಇದಲ್ಲದೇ ಕಾರ್ಕಳ ತಾಲೂಕಿನ ಹಲವೆಡೆ ಮಟ್ಕಾ ಹಾಗೂ ಗಾಂಜಾ ಮಾರಾಟ ದಂಧೆ ಜೋರಾಗಿದ್ದು ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
