Share this news

ಕಾರ್ಕಳ,ಡಿ.15 : ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಸಲಕರಣೆಗಳು ಹಾಗೂ ಕಾಂಕ್ರೀಟ್ ಯಂತ್ರಗಳನ್ನು ತುಂಬಿಸಿ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಮಾಲೀಕನ ವಿರುದ್ಧ ಕಾರ್ಕಳ ಪೊಲೀಸರು ಕೇಸ್ ದಾಖಲಿಸಿಕೊಂಡು 10 ಸಾವಿರ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದಾರೆ.

ವಾಹನ ಮಾಲೀಕ ನಾಗಪ್ಪ ಎಂಬವರು ಕಾಂಕ್ರೀಟ್ ಕೆಲಸ ವಹಿಸಿಕೊಂಡು ತನ್ನ ಕಾರ್ಮಿಕರನ್ನು ನಿಯಮಬಾಹಿರವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದರು.
ಕಾರ್ಕಳ ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆಯಾದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು
ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ ಬಗ್ಗೆ ಹಲವಾರು ಬಾರಿ ಖಡಕ್ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದೆ ಮತ್ತದೇ ಚಾಳಿಯನ್ನು ಮುಂದುವರಿಸುತ್ತಿದ್ದು, ವಾಹನದಲ್ಲಿ ಇಷ್ಟಬಂದಂತೆ ಕಾರ್ಮಿಕರನ್ನು ತುಂಬಿಸಿಕೊಂಡು, ಅತಿವೇಗ ಹಾಗೂ ನಿರ್ಲಕ್ಷದಿಂದ ವಾಹನ ಚಲಾಯಿಸುವುದು ದಾರಿಯಲ್ಲಿ ಓಡಾಡುವ ಇತರ ವಾಹನಗಳಿಗೂ ತೊಂದರೆಯಾಗುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಕಾರ್ಕಳ ನಗರ ಪೊಲೀಸರು ವಾಹನವನ್ನು ಬೆನ್ನಟ್ಟಿ ಕಾರ್ಕಳ ಪುರಸಭಾ ವ್ಯಾಪ್ತಿಯ ಶಿವತಿಕೆರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಕಾರ್ಕಳ ನ್ಯಾಯಾಲಯಕ್ಕೆ ಒಪ್ಪಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ
ಕೆಲವು ವರ್ಷಗಳ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ಗಾನ ಗ್ರಾಮದ ಶಾಲಾ ಮುಂಭಾಗದ ತಿರುವಿನಲ್ಲಿ ವಾಹನದಲ್ಲಿದ್ದ
ಸಿಮೆಂಟ್ ಕಾಂಕ್ರೀಟ್ ಮಷೀನ್ ಕಾರ್ಮಿಕರ ಮೇಲೆ ಮಗುಚಿ ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವಾರು ಕಾರ್ಮಿಕರು ಗಂಭೀರ ಗಾಯ ಗೊಂಡಿದ್ದರು.ಈ ಘಟನೆ ನಡೆದು ಹಲವು ದಿನಗಳ ಕಾಲ ಘಟನೆಯ ಗಂಭೀರತೆಯನ್ನು ಅರಿತು ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ ಪುನಃ ಹಿಂದಿಂನಂತೆ ಕಾರ್ಮಿಕರನ್ನು ಕೊಂಡೊಯ್ಯುವುದು ಅಪಾಯ ಎನ್ನುವುದು ಅರಿತಿದ್ದರೂ ಕ್ಯಾರೇ ಎನ್ನದ ಕಾರ್ಮಿಕರಿಗೆ ಹಾಗೂ ಕಾಂಟಾಕ್ಟ್ ದಾರರಿಗೆ ನ್ಯಾಯಾಲಯದ ಮೂಲಕ ದಂಡ ಪಾವತಿಸುವಂತೆ ಮಾಡಿ
ಎಚ್ಚರಿಕೆಯ ಕರೆಗಂಟೆ ನೀಡಿದೆ ಹಾಗೂ ಸಾರ್ವಜನಿಕರು ಪೋಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *