
ಉಡುಪಿ,ಡಿ.17: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಕಿನ್ನಿಮೂಲ್ಕಿ ಬಳಿ ನಡೆದಿದೆ.
ಒಂದೂವರೆ ವರ್ಷದ ಕೀರ್ತನ ಮೃತ ಕಂದಮ್ಮ. ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ತಾಯಿ ಕೈಯಿಂದ ಜಾರಿ ಮಗು ಬಾವಿಗೆ ಬಿದ್ದಿದೆ. ತಕ್ಷಣವೇ ಮಗುವಿನ ರಕ್ಷಣೆಗೆ ಹಗ್ಗದ ಸಹಾಯದಿಂದ ತಾಯಿ ನಯನ ಬಾವಿಗಿಳಿದು ಮಗುವನ್ನು ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ.
ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
.
.
