
ಹೆಬ್ರಿ, ಡಿ.18: ಮೂರ್ಚೆರೋಗ ಇದ್ದ ಯುವಕನೋರ್ವ ಫಾಲ್ಸ್ ನಲ್ಲಿ ಬಂಡೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ 2 ದಿನಗಳ ಬಳಿಕ ಮೃತಪಟ್ಟಿದ್ದಾರೆ.
ಉಡುಪಿ ಕೊಂಜಾಡಿ ಮೂಲದ ಮನ್ವೀತ್ (25) ತನ್ನ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಡಿ. 12ರಂದು ಕೊಂಜಾಡಿಗೆ ಬಂದಿದ್ದರು.ಬಳಿಕ ಡಿ.14 ರಂದು ಬೆಳಗ್ಗೆ 11.30 ರ ವೇಳೆಗೆ ಗಂಟೆಗೆ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಹೋಗಿದ್ದರು. ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವೀತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದಾಗ ಆಕಸ್ಮಿಕವಾಗಿ ತಲೆ ತಿರುಗಿ ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಚಿಕಿತ್ಸೆಗೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಡಿ.17 ರಂದು ಮೃತಪಟ್ಟಿದ್ದಾರೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
.
