
ಕಾರ್ಕಳ,ಡಿ. 26: ಕಾರ್ಕಳ ಭಂಂಡಾರಿ ಸಮಾಜ ಸಂಘ, ಮಹಿಳಾ ಸಂಘ ಹಾಗೂ ಯುವ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಕಾಬೆಟ್ಟು ವೇಣುಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ಸತ್ಯನಾರಾಯಣ ಪೂಜೆ ವೃತ್ತಿ ನಿರತ ಹಿರಿಯರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರುಗಿತು.ಬೆಳಿಗ್ಗೆ ಭಜನಾ ಕಾರ್ಯಕ್ರಮದ ಬಳಿಕ ಸತ್ಯನಾರಾಯಣ ಪೂಜೆ ನೆರವೇರಿತು.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಹಾಮಂಡಲದ ಅಧ್ಯಕ್ಷೆ ಅಮಿತಾ ಗಿರೀಶ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶೇಖರ್ ಎಚ್ ಭಂಡಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು, ಶಶಿಧರ ಕೆ ಭಂಡಾರಿ, ಉಡುಪಿ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ, ಮೂಡಬಿದರೆ ಸಂಘದ ಅಧ್ಯಕ್ಷ ಗುರುಪ್ರಸಾದ್ ಎಂ ಭಂಡಾರಿ, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ರಾಜೇಶ್ ಭಂಡಾರಿ, ಯುವ ವೇದಿಕೆ ಅಧ್ಯಕ್ಷ ಪವನ್ ಭಂಡಾರಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಸಂಘದ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೃಷ್ಣ ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಅಗಲಿದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೃತ್ತಿನಿರತ ಹಿರಿಯರಾದ ಶೇಖರ್ ಭಂಡಾರಿ ಕೌಡೂರು, ಮಾಧವ ಭಂಡಾರಿ ಮೂಜೂರು, ವಸುದೇಶ್ ಭಂಡಾರಿ ಪಳ್ಳಿ ಅವರನ್ನು ಸನ್ಮಾನಿಸಲಾಯಿತು.
ಪ್ರಜ್ವಲ್ ಭಂಡಾರಿ ಕೌಡೂರು, ಡಾಕ್ಟರ್ ನಿರೀಕ್ಷಾ ಸದಾನಂದ ಭಂಡಾರಿ ನಲ್ಲೂರು ಮತ್ತು ರಕ್ಷಿತ್ ಭಡಾರಿ ಸಿ.ಎ. ಬೆಳ್ಮಣ್ಣು ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. 2024 -25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80 % ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮುಂದಿನ 2026 _ 27ರ ಅವಧಿಗೆ ನೂತನ ಅಧ್ಯಕ್ಷರಾಗಿ ಕೃಷ್ಣ ಭಂಡಾರಿ ಜೋಡುಕಟ್ಟೆ, ಪ್ರಧಾನ ಕಾರ್ಯದರ್ಶಿ ಯಾಗಿ ನವೀನ್ ಭಂಡಾರಿ ಬೈಲೂರು, ಮತ್ತು ಕೋಶಾಧಿಕಾರಿಯಾಗಿ ರೇಷ್ಮಾ ಸುದರ್ಶನ್ ಭಂಡಾರಿ ಆಯ್ಕೆಯಾದರು.


.
.
