
ಕಾರ್ಕಳ, ಡಿ. 26: ತಾಲೂಕಿನ ಕುಕ್ಕುಂದೂರು ನಿವಾಸಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಡಿ.25 ರಂದು ನಡೆದಿದೆ.
ಕುಕ್ಕುಂದೂರು ಗ್ರಾಮದ ಜೊಡುರಸ್ತೆ ಅಧಿಧನ್ ಬಿಲ್ಡಿಂಗ್ ನಲ್ಲಿ ವಾಸ ಮಾಡುತ್ತಿದ್ದ ಗುಣೇಂದ್ರ ಪುತ್ರನ್ (61ವ) ಮೃತಪಟ್ಟವರು.
ಅವರು ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ಮನೆಯಲ್ಲಿದ್ದ ವೇಳೆ ಏಕಾಏಕಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ನೀರು ಕುಡಿದು ಸಾವರಿಸಿಕೊಂಡು ಕುಳಿತಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
