
ಹೆಬ್ರಿ,ಜ.13: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚಿಗೆ ನಡೆದ ಲಕ್ಷಕಂಠ ಗೀತಾ ಪಾರಾಯಣಕ್ಕೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಿ ಅದನ್ನು ಮೋದಿಯವರಿಗೆ ನೀಡಿದ ಹೆಬ್ರಿಯ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ಆಶಿಶ್ ಎಚ್. ಎಂಬ ವಿದ್ಯಾರ್ಥಿಗೆ ಪ್ರಧಾನಿ ಕಛೇರಿಯಿಂದ ಮೆಚ್ಚುಗೆಯ ಪ್ರಶಂಸಾ ಪತ್ರ ಕಳುಹಿಸಲಾಗಿದೆ.
ಈ ವಿದ್ಯಾರ್ಥಿಯನ್ನು ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಮತ್ತು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.


.
.
