
ಕಾರ್ಕಳ, ಜ.16: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ಜ.14 ರಂದು ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕ ಸ್ವಂಕಾರ್ ಬಸುಮತ್ರಿ(29ವರ್ಷ) ಮೃತಪಟ್ಟ ದುರ್ದೈವಿ.
ಸ್ವಂಕಾರ್ ಹೆಬ್ರಿಯ ಶಿವಪುರದ ಶಿವ ಎಲೆಕ್ಟ್ರಿಕಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಜ.14 ರಂದು ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ರುಬಾಂಗ್ ಮತ್ತು ಉಳಿದ ಕಾರ್ಮಿಕರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾಗ ಹೊಸ ಕೆ.ಇ.ಬಿ ಕಂಬ ಅಳವಡಿಸಿ ಅದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಪರೀತ ಸಿಡಿಲು, ಮಳೆ ಬರುತ್ತಿದ್ದು, ಕಂಬದಲ್ಲಿದ್ದ ವ್ಯಕ್ತಿ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅವರನ್ನು ಕಾರ್ಕಳ ಡಾ.ಟಿ ಎಂ.ಎ ಪೈ ರೋಟರಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
