
ಕಾರ್ಕಳ, ಜ.16: ಮರ್ಣೆ ಗ್ರಾಮದ ಅಜೆಕಾರಿನ ನಿವಾಸಿ ದೇವರಾಯ ಹೆಗ್ಡೆ(80) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಶುಕ್ರವಾರ ಮುಂಜಾನೆ ತಮ್ಮ ವಾಸದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಅಜೆಕಾರಿನಲ್ಲಿ ಭಾಗ್ಯಶ್ರೀ ಬಟ್ಟೆ ಅಂಗಡಿಯ ಮಾಲೀಕರಾಗಿದ್ದ ದೇವರಾಯ ಹೆಗ್ಡೆಯವರ ಪತ್ನಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿದ್ದರು.ಇದರಿಂದ ಅವರು ಸಾಕಷ್ಟು ನೊಂದು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇದೇ ಕಾರಣದಿಂದ ನೇಣಿಗೆ ಶರಣಾಗಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

.
.
.
.
