
ಕಾರ್ಕಳ, ಜ.19:ಬಜಗೋಳಿಯಲ್ಲಿ ತುಡರ್ ಕಾಂಪ್ಲೆಕ್ಸ್ ನಲ್ಲಿ ನೂತನ ಈಕ್ವಿನೋಕ್ಸ್ ಕ್ರಿಯೇಟರ್ ಸ್ಟುಡಿಯೋ ಭಾನುವಾರ ಶುಭಾರಂಭಗೊಂಡಿತು.
ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ನೂತನ ಸ್ಟುಡಿಯೋ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಾಳ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ಯುವಶಕ್ತಿ ಅಧ್ಯಕ್ಷರಾದ ನಂದಗೋಪನ್, ನಿವೃತ ಶಿಕ್ಷಕ ‘ರಂಗಕರ್ಮಿ ಶ್ರೀರಂಗ ಜೋಶಿ, ತಾಲ್ಲೂಕು ಭಜನಾ ಸಂಸ್ಕಾರ ವೇದಿಕೆ ಅಧ್ಯಕ್ಷ ಗುರುಪ್ರಸಾದ್, ಹಿರಿಯರಾದ ರಾಘವ ನಾಯ್ಕ್, ರಾಜೇಶ್ ನಾಯ್ಕ್, ಸುಧಾಕರ್ ನಾಯ್ಕ್ ಉಪಸ್ಥಿತರಿದ್ದರು.
ಸ್ಟುಡಿಯೋ ಮಾಲಕ ಸೌರಭ್ ನಾಯ್ಕ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಎಲ್ಲಾ ರೀತಿಯ ಹಾಡುಗಳ ಡಬ್ಬಿಂಗ್, ವಿಡಿಯೋ ಎಡಿಟಿಂಗ್,ಫೋಟೋ ಎಡಿಟಿಂಗ್, ಶುಭ ಸಮಾರಂಭಗಳ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಒಂದೇ ಸೂರಿನಡಿ ಲಭ್ಯವಿದೆ.

.
.
.
.
