
ಹೆಬ್ರಿ,ಜ. 21: ಸಾಲ ಮರುಪಾವತಿ ಮಾಡಲು ನೋಟಿಸ್ ನೀಡಿದ ವಿಚಾರದಲ್ಲಿ ಸಾಲಗಾರ ವ್ಯಕ್ತಿಯೊಬ್ಬರ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ಸೋಮವಾರ (ಜ.19) ನಡೆದಿದೆ.
ವರಂಗ ಮಾತಿಬೆಟ್ಟು ನಿವಾಸಿ ಪ್ರಕಾಶ ತೆಲಿಗ ಎಂಬವರು ಪಕ್ಕದ ವಿದ್ಯಾನಂದ ಶೆಟ್ಟಿ ಎಂಬವರ ಮನೆಯಂಗಳಕ್ಕೆ ಪ್ರವೇಶಿಸಿ ತನಗೆ ವರಂಗ ಸಹಕಾರಿ ಬ್ಯಾಂಕಿನಲ್ಲಿ ಇರುವ ಸಾಲದ ಬಗ್ಗೆ ವಿದ್ಯಾನಂದ ಶೆಟ್ಟಿ ಅವರು ಬ್ಯಾಂಕಿನಲ್ಲಿ ಕೆಲಸ ಮಾಡುವ ತನ್ನ ಅಕ್ಕನಿಗೆ ತಿಳಿಸಿ ನೋಟಿಸ್ ನೀಡಿದ್ದಾರೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಬಟ್ಟೆಯನ್ನು ಎಳೆದಾಡಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾನಂದ ಶೆಟ್ಟಿ ದೂರು ನೀಡಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
