
ಹೆಬ್ರಿ,ಜ.27: ಬೈಕಿಗೆ ಟಾಟಾ ಏಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೆಬ್ರಿಯ ವರಂಗದಲ್ಲಿ ಭಾನುವಾರ ನಡೆದಿದೆ.
ಶಂಕರನಾರಾಯಣದ ರಾಮ ಅವರು ತನ್ನ ಸಂಬಂಧಿ ಮನೋಜ್ ಅವರೊಂದಿಗೆ ಬೈಕಿನಲ್ಲಿ ಹೆಬ್ರಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ವರಂಗ ಕೆಲ್ ಟೆಕ್ ಕ್ರಾಸ್ ಬಳಿ ಕಾರ್ಕಳ ಕಡೆಯಿಂದ ವೇಗವಾಗಿ ಬಂದ ಟಾಟಾ ಏಸ್ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
