
ಕಾರ್ಕಳ, ಜ27: ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಎರಡನೇ ದಿನದ ಸಂಭ್ರಮದ ಆಧ್ಯಾತ್ಮಿಕ ಕಾರ್ಯಗಳು ಹಾಗೂ ದೈವಾರಾಧನ ವಿಧಿಗಳು ಮಹತ್ವಪೂರ್ಣವಾಗಿ ನೆರವೇರಿದವು. ಬೆಳಗ್ಗೆ 8.00 ಗಂಟೆಗೆ ಪ್ರಥಮ ಪವಿತ್ರ ಬಲಿಪೂಜೆ ನಡೆಯುವ ಮೂಲಕ ಅದ್ದೂರಿಯಾಗಿ ಪ್ರಾರಂಭವಾಯಿತು. ಬೆಳ್ಮಣ್ ಧರ್ಮಕೇಂದ್ರದ ಸಹಾಯಕ ಫಾದರ್ ಓಸ್ವಾಲ್ಡ್ ವಾಜ್ ನಡೆಸಿದರು.
ಈ ದಿನದ ಮಹೋತ್ಸವದ ಪ್ರಮುಖ ಬಲಿಪೂಜೆ ಸಂಜೆ 5 ಗಂಟೆಗೆ ಕನ್ನಡದಲ್ಲಿ ನೆರವೇರಿತು. ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಡುಮಿಂಗ್ ಡಯಾಸ್ ಪ್ರಧಾನ ಗುರುಗಳಾಗಿ ನೆರವೇರಿಸಿದರು. ಅವರು ತಮ್ಮ ಪ್ರೇರಣಾದಾಯಕ ಪ್ರವಚನದಲ್ಲಿ “ದಿಲೆಕ್ಸಿತ್ ತೆ ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ ವಿಷಯದ ಮೇಲೆ ಪ್ರೇರಣಾದಾಯಕ ಬೋದನೆ ಮಾಡಿದರು. ಅವರು ಪೋಪ್ ಲಿಯೋ ಅವರ ಇತ್ತೀಚಿನ ಪ್ರೇಷಿತ ಪತ್ರದ ಉಲ್ಲೇಖಿಸಿ, ಉದಾಹರಿಸಿ, ಕ್ರೈಸ್ತರ ಹಕ್ಕು ಮತ್ತು ಬಡಜನರಿಗೆ ಅಗತ್ಯವಿರುವವರಿಗೆ ಸಹಾಯ ಮಾಡಲು ಕರೆನೀಡಿದರು.

ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತದ ವಿವಿಧ ಧರ್ಮಕೇಂದ್ರಗಳಿಂದ ಬಂದ ಗಾಯನ ಮಂಡಳಿಗಳು ತಮ್ಮ ಭಕ್ತಿಯ ಗಾಯನ ಸಂಗೀತದಿಂದ ಬಲಿಪೂಜೆಯ ಮೆರುಗನ್ನು ಹೆಚ್ಚಿಸಿದರು. ವಿಲ್ಸನ್ ಡಿ’ಸೋಜಾ ಮತ್ತು ಪ್ರದೀಪ್ ಕಾರ್ಡೋಜಾ ಅವರು ದೈವಾರಾಧನ ವಿಧಿ ಹಾಗೂ ಬಲಿಪೂಜೆಗೆ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು.
ಈ ದಿನವು ಹಲವಾರು ಪ್ರತಿಷ್ಠಿತ ವ್ಯಕ್ತಿಗಳಿಂದ ಭೇಟಿ ದೊರಕಿತು. ಎಂಎಲ್‌ಸಿ ಐವಾನ್ ಡಿ’ಸೋಜಾ, ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ, ಮತ್ತು ನಾರಾಯಣ ಗುರು ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಫಿಲಿಪ್ ಡಿ’ಕೋಸ್ತಾ, ಉದ್ಯಮಿ ಮೊದಲಾದವರು ಭೇಟಿ ನೀಡಿದರು. ಅವರು ಧರ್ಮಾಧ್ಯಕ್ಷರನ್ನು ಮತ್ತು ಬಸಿಲಿಕಾದ ಗುರುವರಿಯರನ್ನು ಭೇಟಿಯಾಗಿದ್ದು ಹಬ್ಬದ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸಿದರು.
ಮಹೋತ್ಸವದ ಇತರ ಬಲಿಪೂಜೆಗಳನ್ನು ಗುರು ಅನಿಲ್ ಡಿಸೋಜ (ಪಕ್ಷಿಕರೆ ಧರ್ಮಕೇಂದ್ರ), ಗುರು ಸಿರಿಲ್ ಲೋಬೊ (ದಿವ್ಯ ಧಾಮ ಗುರುಮಠ, ಮೂಡುಬೆಳ್ಳೆ), ಗುರು ಜಾನ್ ಫ್ರಾನ್ಸಿಸ್ ಸಿಕ್ವೆರಾ (ಕಾರ್ಮೆಲ್ ಸಭೆ), ಗುರು ಅಸ್ಸಿಸ್ಸಿ ಫ್ರಾನ್ಸಿಸ್ ಡಿ’ಅಲ್ಮೆಡಾ (ಕಾರ್ಯದರ್ಶಿ ಏಖಅಇ, ಬೆಂಗಳೂರು), ಗುರು ಜೋಸಫ್ ಮಾರ್ಟಿಸ್ (ದೆರೆಬೈಲ್ ಧರ್ಮಕೇಂದ್ರ), ಗುರು ಡೆನಿಸ್ ಡೆಸಾ (ತೊಟ್ಟಂ ಧರ್ಮಕೇಂದ್ರ), ಗುರು ವಿಜಯ್ ಡಿಸೋಜ (ಪ್ರಾಶುಂಪಾಲರು, ಸಂತ ಮೇರಿ ಅಃSಅ ಶಾಲೆ ಉಡುಪಿ), ಮತ್ತು ಗುರು ಜಾನ್ಸನ್ ಸಿಕ್ವೇರಾ (ಪ್ರಾಂಶುಪಾಲರು ಲೂರ್ಡ್ಸ್ ಸಿಬಿಎಸ್‌ಇ ಶಾಲೆ, ಬಿಜಾಯ್) ಇವರೆಲ್ಲರು ನೆರವೇರಿಸಿದರು.
ಬಾಸಿಲಿಕಾದ ರೆಕ್ಟರ್ ಗುರು ಆಲ್ಬನ್ ಡಿಸೋಜ ಮತ್ತು ಸಹಾಯಕ ಗುರು ರೋಬಿನ್ ಸಾಂತುಮಾಯೆರ್ ಅವರು ಎಲ್ಲಾ ಆಯೋಜನೆಗಳನ್ನು ಅಚ್ಚುಕಟ್ಟಾಗಿ ಮೇಲ್ವಿಚಾರಣೆ ನಡೆಸಿದರು. ಬಸಿಲಕಾ ಧರ್ಮಕೇಂದ್ರದ ಉಪಾಧ್ಯಕ್ಷ ಶ್ರೀ ಸಂತೋಷ್ ಡಿ’ಸಿಲ್ವಾ, ಕಾರ್ಯದರ್ಶಿ ಶ್ರೀ ರೋನಾಲ್ಡ್ ನೊರೋನ್ಹಾ ಮತ್ತು ನಿಯೋಜಿತ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ಶ್ರೀ ವಂದಿಷ್ ಮಾಥಾಯಸ್ ಮತ್ತು ಮೇಲ್ವಿನ್ ಕ್ಯಾಸ್ಟೆಲಿನೊ ಇವರರು ಸಹಕರಿಸಿದರು.

.
.
.
.
