
ಹೆಬ್ರಿ, ಜ.28: ಗೋಧಾಮದಲ್ಲಿ ಡಾ. ರಾಮಕೃಷ್ಣ ಆಚಾರ್ಯರು ಕೃಷಿಯೊಂದಿಗೆ, ಗೋವುಗಳ ಸೇವೆ ಮಾಡಿ ಮನ್ನಣೆ ಪಡೆದಿದ್ದಾರೆ. ರೈತನ ಬದುಕಿನ ಬಗ್ಗೆ ವಿಶೇಷ ಗೌರವ ನೀಡಿ ರೈತ ಪೀಠ ಪ್ರಶಸ್ತಿ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ. ವಿಜ್ಞಾನ, ವೈಚಾರಿಕತೆ, ಕೃಷಿ, ಆಧುನಿಕತೆಯೊಂದಿಗೆ, ಪ್ರಾಕೃತಿಕ ಸೌಂದರ್ಯದೊಂದಿಗೆ ನಾಗಮಂಡಲ ನಡೆಯುತ್ತಿರುವುದು ಇಲ್ಲಿಯ ಹೆಮ್ಮೆ ಎಂದು ಮೂಡುಬಿದರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಅವರು ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫ್ರೆಬ್ರವರಿ 19ರಿಂದ 21 ರ ತನಕ ನಡೆಯಲಿರುವ ಏಕಪ್ರವಿತ್ರ ಶ್ರೀಮನ್ನಾಗಮಂಡಲದ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುನಿಯಾಲು ಗೋಧಾಮದ ಶ್ರೀಮನ್ನಾಗಮಂಡಲದ ರೂವಾರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಗೋಧಾಮದ ಮುಖ್ಯಸ್ಥೆ ಸವಿತಾ ರಾಮಕೃಷ್ಣ ಆಚಾರ್ ಉಪಸ್ಥಿತರಿದ್ದರು.
ಶ್ರೀಕಾಂತ್ ಶೆಟ್ಟಿ ಕಾರ್ಕಳ ಸ್ವಾಗತಿಸಿದರು.

.
.
.
.
