Share this news

ತುಮಕೂರು,ಫೆ.05 : ರಾಜ್ಯದಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಜನ ಬೇಸತ್ತು ಹೋಗಿದ್ದು, ಈ ನಡುವೆ ತುಮಕೂರಿನಲ್ಲಿ ಭ್ರಷ್ಟ ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ರೈತನೋರ್ವ ಮೂಲಂಗಿಯನ್ನೇ ಲಂಚವಾಗಿ ಕೊಡುತ್ತೇನೆ ಬನ್ನಿ ಎಂದು ತಾನು ಬೆಳೆದ ಮೂಲಂಗಿಯೊAದಿಗೆ ತಾಲೂಕು ಕಚೇರಿಗೆ ಬಂದು ಆಕ್ರೋಶ ಹೊರಹಾಕಿದ ಘಟನೆ ತುಮುಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:
ತಾಲೂಕಿನ ಜಕ್ಕೇನಹಳ್ಳಿಯ ರೈತ ಪ್ರಸನ್ನಕುಮಾರ್ ತನ್ನ ಜಮೀನಿನಲ್ಲೇ ತರಕಾರಿ ಇತರೆ ಕೃಷಿ ಉತ್ಪನ್ನಗಳನ್ನು ಬೆಳೆದು ಜೀವನ ನಡೆಸುತ್ತಿದ್ದರು ಆದರೆ ಇವರ ಜಮೀನಿಗೆ ರಸ್ತೆಯಿಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ.ಇತ್ತ ದಾರಿ ಒತ್ತುವರಿ ತೆರವು ಮಾಡದೇ ಅತ್ತ ಹೊಸ ದಾರಿ ಮಾಡಿಕೊಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇದರಿಂದ ರೈತನ ಜಮೀನಿಗೆ ಕಾನೂನು ಬದ್ಧವಾಗಿ 1 ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಲೋಕಾಯುಕ್ತ ಸೂಚಿಸಿತ್ತು. ಈಗ 2 ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಕಾನೂನು ಬದ್ಧ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದು, ಬೇರೆ ದಾರಿಯಿಲ್ಲದೇ ತಹಶೀಲ್ದಾರ್ ಬಳಿಯಲ್ಲೂ ಮನವಿ ಮಾಡಿದ್ದಾಗ ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೂ ಇಲ್ಲಿಯವರೆಗೂ ರಸ್ತೆ ನಿರ್ಮಾಣಕ್ಕೆ ಬಾರದ ಹಣಕ್ಕಾಗಿ ಸತಾಯಿಸಿದ್ದ ಕಂದಾಯ ನಿರೀಕ್ಷಕ ಜಯಪ್ರಕಾಶ ಹಾಗೂ ಶಿವನಗೆರೆ ವಿ.ಎ ಶರಣ್ ಎಂಬವರು ಲಂಚಕ್ಕೆ ಬೇಡಿಕೆಯಿಟ್ಟಿದ್ದು,ತನ್ನಲ್ಲಿ ಹಣವಿಲ್ಲ ಇಂದು ಆಡಳಿತ ಹಾಗಾಗಿ ಬೆಳೆದ ಮೂಲಂಗಿ ನೀಡುವುದಾಗಿ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರದಲ್ಲಿ ಸಮಸ್ಯೆ ಈಡೇರಿಸದಿದ್ದರೆ ಆತ್ಮಹತ್ಯೆ :
ಜಮೀನಿಗೆ ರಸ್ತೆ ಲಂಚಕೊಡಲು ಹಣವಿಲ್ಲದೇ ತಾನು ಬೆಳೆದ ಮೂಲಂಗಿ ನೀಡಲು ನಾನು ಬಂದಿದ್ದೇನೆ. ಅದೂ ಸಾಲದಿದ್ದರೆ ನನ್ನ ಮನೆ ಬರೆದು ಕೊಡುತ್ತೇನೆ ಇಲ್ಲವೇ ನನ್ನ ಅಸ್ತಿಯನ್ನೇ ಬರೆದು ಕೊಡ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತಪ್ರಸನ್ನ ಕುಮಾರ್ ಈ ಬಗ್ಗೆ ಸಿಎಂ ಬಳಿಗೂ ಹೋಗಿದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಜಮೀನಿಗೆ ದಾರಿ ಬಿಡಿಸಿಕೊಡುವಂತೆ ಅದೇಶ ತಂದಿದ್ದೆ. ನಕಾಶೆಯಲ್ಲೂ ರಸ್ತೆಯಿದ್ದು ನನಗೆ ರಸ್ತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ನೀಡದಿದ್ದರೆ ಒಂದು ವಾರದಲ್ಲಿ ಇದೇ ಕಚೇರಿಯಲ್ಲೇ ನೇಣು ಹಾಕಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ರೈತನ ಸಮಸ್ಯೆಗೆ ಕಂದಾಯ ಇಲಾಖೆಯಿಂದ ಪರಿಹಾರ:
ನಮ್ಮದು ಎಂದಿಗೂ ಪಾರದರ್ಶಕ ಕೆಲಸಕ್ಕೆ ಬೆಲೆ ನೀಡುವ ಇಲಾಖೆ, ಈ ರೈತನ ಬಗ್ಗೆ ತಿಳಿದಿದ್ದು ನಮ್ಮ ಅಧಿಕಾರಿಗಳ ತಪ್ಪಿದ್ದರೆ ಕಾನೂನು ರೀತಿ ಕ್ರಮಕ್ಕೆ ಮುಂದಾಗುತ್ತೇವೆ. ಹಾಗೂ ನಕಾಶೆ ರಸ್ತೆಯಿದ್ದರೆ ವಾರದೊಳಗೆ ರಸ್ತೆ ನಿರ್ಮಿಸುವ ಕೆಲಸ ಮಾಡಿಕೊಡುತ್ತೇವೆ ಬಬ್ಬ ರೈತ ಈ ನಾಡಿನ ಅಸ್ತಿ, ಅವರು ಸಾಯುವ ಮಾತಾಡಬಾರದು ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಹೇಳಿದ್ದಾರೆ.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *