
.
.
.
.

ಕಾರ್ಕಳ, ಫೆ. 06: ತಾಲೂಕಿನ ನಿಟ್ಟೆಯ ದೂಪದಕಟ್ಟೆ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ.
ಹರೀಶ್ ಎಂಬಾತ ರುದ್ರೇಶ್ ಎಂಬವರೊಂದಿಗೆ ಗುರುವಾರ ಸಂಜೆ ಬೈಕಿನಲ್ಲಿ ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಜಂಕ್ಷನ್ ಹೋಗುತ್ತಿದ್ದಾಗ ಅತ್ತೂರು ಕಡೆಯಿಂದ ಬರುತ್ತಿದ್ದ ಸಚಿನ್ ಅವರ ಕಾರಿಗೆ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಕಾರು ಮತ್ತು ಬೈಕ್ ಜಖಂಗೊಂಡಿದ್ದು, ಸವಾರರಿಬ್ಬರು ಗಾಯಗೊಂಡಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.