
ಕಾರ್ಕಳ, ಫೆ.17: ಕೌಟುಂಬಿಕ ಕಲಹದಲ್ಲಿ ಪರಸ್ಪರ ಹಲ್ಲೆ ನಡೆಸಿ, ಬೆದರಿಕೆ ಹಾಕಿರುವುದಾಗಿ ಕಾರ್ಕಳ ನಗರ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.
ಕಾರ್ಕಳ ಕಸಬಾ ಗ್ರಾಮದ ಶಾಂತಮಣಿ ಅವರ ಮಗ ಕುಮಾರ@ ಅಂಗಸ್ವಾಮಿ ಮತ್ತು ಅವರ ಪತ್ನಿ ಸೌಮ್ಯ ಅವರಿಗೆ ಕೌಟುಂಬಿಕ ವಿಚಾರದಲ್ಲಿ ಕಾರ್ಕಳ ಪಿಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2026ರ ಫೆ.12 ರಂದು ದೋಷಮುಕ್ತಿಯಾಗಿತ್ತು. ಸೌಮ್ಯ ಅವರು ಗಂಡನ ಮನೆಗೆ ಬಾರದಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಆದರೂ ಫೆ. 16 ರಂದು ಬೆಳಿಗ್ಗೆ ಸೌಮ್ಯ ಅವರು ಕಾರ್ಕಳ ಕಸಬಾದಲ್ಲಿರುವ ತನ್ನ ಗಂಡನ ಮನೆಗೆ ಬಂದು ಅಕ್ರಮ ಪ್ರವೇಶ ಮಾಡಿ ಗಂಡನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು,ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾರೆ ಎಂದು ಶಾಂತಮಣಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಇನ್ನೊಂದೆಡೆ ಸೌಮ್ಯ ಅವರು ನ್ಯಾಯಾಲಯಕ್ಕೆ ಬಂದಿದ್ದ ಸಂದರ್ಭ ಗಂಡನಲ್ಲಿ ತನ್ನ ಒಡವೆಗಳನ್ನು ಕೇಳಿದಾಗ ಅವರು ಮನೆಗೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ ತಾನು ಗಂಡನ ಮನೆಗೆ ಬಂದು ಮನೆಯಲ್ಲಿದ್ದ ಅವರ ತಾಯಿ ಶಾಂತಮಣಿ ಹಾಗೂ ಬಾವನ ಮಗ ಸಮೀತ್ ಬಳಿ ಒಡವೆಯನ್ನು ಕೇಳಿದಾಗ ಅವರು ಒಡವೆ ಕೊಡುವುದಿಲ್ಲ ಎಂದಿದ್ದಾರೆ. ಗಂಡ ಮನೆಯಲ್ಲಿ ಇರದ ಕಾರಣ ಸೌಮ್ಯ ಅವರಿಗಾಗಿ ಕಾದು ಕುಳಿತ ವೇಳೆ ಶಾಂತಮಣಿ ಹಾಗೂ ಸಮಿತ್ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆಂದು ಸೌಮ್ಯ ಪ್ರತಿದೂರು ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
.
.
.
.
.
.
