Share this news

 

ಕರಾವಳಿನ್ಯೂಸ್ ಡೆಸ್ಕ್ ವಿಶೇಷ ವರದಿ

ತೈಲ ಸಂಪದ್ಭರಿತ ಮಧ್ಯಪ್ರಾಚ್ಯದಲ್ಲಿ ಇದೀಗ ಇರಾನ್, ಇಸ್ರೇಲ್ ಹಾಗೂ ಅಮೇರಿಕಾ ನಡುವೆ ಯುದ್ಧ ತೀವ್ರಗೊಂಡಿದೆ. ಉಭಯ ದೇಶಗಳ ನಡುವಿನ ಸಂಘರ್ಷದಿAದಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು ಇದರಿಂದ ದರ ಹೆಚ್ಚಳವಾಗಿ ಆರ್ಥಿಕವಾಗಿ ಬಹುತೇಕ ಎಲ್ಲಾ ದೇಶಗಳಿಗೆ ಭಾರೀ ಹೊಡೆತ ಬಿದ್ದಿದೆ. ಭಾರತದಂತಹ ಅತೀಹೆಚ್ಚು ತೈಲ ಆಮದು ಅವಲಂಬಿತ ರಾಷ್ಟ್ರಗಳಿಗೆ ಇದು ದೊಡ್ಡ ಆರ್ಥಿಕ ಸವಾಲಾಗಿದ್ದರೂ, ಅದೇ ಸಮಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರವನ್ನು ವೇಗವಾಗಿ ಅಭಿವೃದ್ಧಿಪಡಿಸಲು ಇದು ಸುವರ್ಣಾವಕಾಶವೂ ಆಗಿದೆ.
ಕೊಲ್ಲಿ ರಾಷ್ಟçಗಳಿಂದ ಕೂಡಿರುವ ಮಧ್ಯಪ್ರಾಚ್ಯವು ವಿಶ್ವದ ಪ್ರಮುಖ ತೈಲ ಉತ್ಪಾದನಾ ಪ್ರದೇಶವಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮಧ್ಯಪ್ರಾಚ್ಯದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಇಲ್ಲಿ ಸಂಘರ್ಷ ತೀವ್ರಗೊಂಡರೆ ಇದರ ನೇರ ಪರಿಣಾಮ ವಿಶ್ವದ ಬಹುತೇಕ ದೇಶಗಳಿಗೆ ತಟ್ಟಲಿದೆ. ಇರಾನ್ ಮೇಲಿನ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮವಾಗಿ ಈ ಜಲಸಂಧಿಯಿAದ ಸಾಗಾಟವಾಗುತ್ತಿದ್ದ ಶೇ 50 ಎಷ್ಟು ತೈಲ ಸಾಗಾಟದಲ್ಲಿ ವ್ಯತ್ಯಯವಾಗಿದೆ.ಇದರಿಂದ ಪ್ರಮುಖವಾಗಿ ಎಲ್‌ಪಿಜಿ ಗ್ಯಾಸ್ ಅಭಾವಕ್ಕೆ ಪ್ರಮುಖ ಕಾರಣವಾಗಿದೆ.
ಭಾರತ ತನ್ನ ತೈಲ ಬಳಕೆಯ ಸುಮಾರು ಶೇ 80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ.ಭಾರತವು ವಿಶ್ವದ ಅತಿ ದೊಡ್ಡ ತೈಲ ಆಮದು ರಾಷ್ಟ್ರಗಳಲ್ಲಿ ಒಂದಾಗಿರುವ ಕಾರಣದಿಂದ ಕಚ್ಚಾ ತೈಲ ಬೆಲೆಯಲ್ಲಿ ಶೇ 10ರಷ್ಟು ಏರಿಕೆಯಾದರೂ ಜಿಡಿಪಿ 0.25% ರಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಇದರ ಜೊತೆ ರೂಪಾಯಿ ಮೌಲ್ಯವು ಕುಸಿಯುವ ಭೀತಿಯೂ ಇದೆ. ಈ ಎಲ್ಲಾ ದುಷ್ಪರಿಣಾಮಗಳನ್ನು ಎದುರಿಸಬೇಕಾದರೆ ಭಾರತವು ತೈಲದ ಮೇಲಿನ ಅತಿಯಾದ ಅವಲಂಬನೆ ಕಡಿಮೆ ಮಾಡಿ, ಇದರ ಬದಲಿಗೆ ಪರ್ಯಾಯ ಮೂಲಗಳಿಂದ ಇಂಧನ ಕಂಡುಕೊಳ್ಳಬೇಕು. ನವೀಕರಿಸಬಹುದಾದ ಇಂಧನದ ಪೈಕಿ ಸೋಲಾರ್, ಪವನ ಶಕ್ತಿ ಬಳಕೆ ಪ್ರಮುಖವಾಗಿದೆ. ಮುಂದಿನ 2030ರೊಳಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾ ವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಸಾಧಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ ಸೋಲಾರ್ ನಿಂದ 250 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಮಹತ್ವದ ಗುರಿ ಹೊಂದಿದೆ. ವರ್ಷಕ್ಕೆ ಸುಮಾರು 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು,ಸುಮಾರು 8 ಲಕ್ಷ ಕೋಟಿ ಹೂಡಿಕೆ ಮತ್ತು 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.ನವೀಕರಿಸಬಹುದಾದ ಇಂಧನದಿAದ ವಿದೇಶಿ ತೈಲ ಅವಲಂಬನೆ ಕಡಿಮೆಯಾಗಿ ಆಮದು ಸುಂಕದಲ್ಲಿ ಇಳಿಕೆ ಮಾತ್ರವಲ್ಲದೇ ಕಾರ್ಬನ್ ಉತ್ಪಾದನೆ ಕಡಿಮೆಯಾಗಿ ಪರಿಸರ ಸಂರಕ್ಷಣೆಗೂ ಪೂರಕವಾಗಲಿದೆ.
ಮಧ್ಯಪ್ರಾಚ್ಯದ ಸಂಘರ್ಷಗಳಿAದ ಉಂಟಾಗುತ್ತಿರುವ ಜಾಗತಿಕ ತೈಲ ಬಿಕ್ಕಟ್ಟು ಭಾರತಕ್ಕೆ ತಾತ್ಕಾಲಿಕವಾಗಿ ಸವಾಲಾಗಿದ್ದರೂ, ಇದು ದೀರ್ಘಾವಧಿಯಲ್ಲಿ ಇಂಧನ ಸ್ವಾವಲಂಬನೆ ಮತ್ತು ನವೀಕರಿಸಬಹುದಾದ ಇಂಧನ ಕ್ರಾಂತಿಗೆ ಇದು ಉತ್ತಮ ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರೀ ಹೂಡಿಕೆಗೆ ಅವಕಾಶ ಕಲ್ಪಿಸಬೇಕಿದೆ.

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *