
ಕಾರ್ಕಳ,ಮಾ. 20: ಪ್ರತಿಷ್ಠಿತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ಪೆರ್ವಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.17 ರಂದು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾಳ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಹಾಗು ರೋಟರಿ ಕ್ಲಬ್ ಕಾರ್ಕಳ ಇದರ ಸದಸ್ಯರಾದ ಡಾ.ದಿಶಾ ದಿವಾಕರ್ ಭಾಗವಹಿಸಿದ್ದರು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿರುವ ಕುಮಾರಿ ರಕ್ಷಾ ಪೂಜಾರಿ, ರೆಂಜಾಳ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ವೆನ್ಸಿಟಾ ಪ್ರಿಯಾಂಕ ಅರಾನ್ಹ, ಕುಕ್ಕುಂದೂರು ಮತ್ತು ಡಾ.ಅಂಬಿಕಾ ನಾಯಕ್, ಅಜೆಕಾರು ಇವರು ರೋಟರಿ ಕುಟುಂಬಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಕ್ಲಬ್ ನ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ Rtn ಡಾ. ಭರತೇಶ್ ಆದಿರಾಜ್, ಕ್ಲಬ್ ಅಧ್ಯಕ್ಷರು Rtn ಸುರೇಂದ್ರ ನಾಯಕ್, ಕಾರ್ಯದರ್ಶಿ Rtn ರಾಘವೇಂದ್ರ ಕಾಮತ್ ಮತ್ತು ಆನ್ಸ್ ಅಧ್ಯಕ್ಷರು ಶರ್ಮಿಳಾ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. Rtn ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮದ ನಿರೂಪಿಸಿದರು.















.
.
.
.
.
.
.
.
.
.
