Share this news

ಕಾರ್ಕಳ, ಮಾ. 24: ಕಾರ್ಕಳದ ಡಾ. ಟಿ.ಎಂ.ಎ ಪೈ ರೋಟರಿ  ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಸಂಪೂರ್ಣ ಮೊಣಕಾಲಿನ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿದೆ.

ದೀರ್ಘಕಾಲದ ಮೊಣಕಾಲು ನೋವಿನಿಂದ ಬಳಲುತ್ತಿದ್ದ 63 ವರ್ಷದ ಮಹಿಳೆಯೊಬ್ಬರು ನಡೆಸಲು ಸಾಧ್ಯವಾಗದೇ ತೊಂದರೆಗೆ ಒಳಗಾಗಿದ್ದರು. ಬಳಿಕ 2024ರಿಂದ ಆಸ್ಪತ್ರೆಯ ಪಿಸಿಯೋಥೆರಪಿ ವಿಭಾಗದ ಡಾ. ಸುನಿಲ್ ಬಾಳಿಗಾ ಮತ್ತು ಡಾ. ಫ್ರಾಂಕ್ಲಿನ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಫಿಸಿಯೋಥೆರಪಿ ಮತ್ತು ಇತರ ಶಸ್ತ್ರ ಚಿಕಿತ್ಸೆಯೇತರ ಚಿಕಿತ್ಸೆಗಳಿಗೆ ಒಳಪಟ್ಟಿದ್ದರೂ, ಅವರ ಸ್ಥಿತಿ ಕ್ರಮೇಣ ಹದಗೆಟ್ಟು ನಡೆದಾಡಲೂ ಅಸಾಧ್ಯವಾದ ಹಿನ್ನಲೆಯಲ್ಲಿ ಅವರಿಗೆ ಮೊಣಕಾಲಿನ ಚಿಪ್ಪು ಬದಲಾಯಿಸುವ ಶಸ್ತ್ರಚಿಕಿತ್ಸೆಯ ಆಯ್ಕೆ ನೀಡಲಾಯಿತು. ಬಳಿಕ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯ ಮೂಳೆಚಿಕಿತ್ಸಾ ಸಲಹೆಗಾರ ಡಾ. ಅರವಿಂದ್ ಶಾನಭಾಗ್ ಅವರು ಕಾರ್ಕಳದ ಡಾ. ಸುನಿಲ್ ಬಾಳಿಗಾ ಮತ್ತು ಡಾ. ಫ್ರಾಂಕ್ಲಿನ್ ನೇತೃತ್ವದ ಮೂಳೆಚಿಕಿತ್ಸಾ ತಂಡದ ಸಹಯೋಗದೊಂದಿಗೆ ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಮೊಣಕಾಲಿನ ಮಂಡಿ ಬದಲಾವಣೆಯ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಕಾರ್ಕಳದ  ಡಾ. TMA ಪೈ ಆಸ್ಪತ್ರೆ ಮೂಳೆಚಿಕಿತ್ಸಾ ಸೇವೆಗಳನ್ನು ಬಲಪಡಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದಂತಾಗುತ್ತದೆ.ಮಾತ್ರವಲ್ಲದೇ ಕಾರ್ಕಳದ ಸುತ್ತಮುತ್ತಲಿನ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ಲಭಿಸಿದಂತಾಗಿದೆ.

ಈ ಕುರಿತು  ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ ಅವರು ಸಂತಸ ವ್ಯಕ್ತಪಡಿಸಿದ್ದು, ಮೂಳೆ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಂಡ, ನರ್ಸಿಂಗ್ ಸಿಬ್ಬಂದಿ, ಫಿಸಿಯೋಥೆರಪಿಸ್ಟ್ , ಆಡಳಿತ ಸಿಬ್ಬಂದಿ ಮತ್ತು ಬೆಂಬಲ ತಂಡಗಳ ಸಂಘಟಿತ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಐತಿಹಾಸಿಕ ಮೈಲಿಗಲ್ಲು ಸಾಧ್ಯವಾಗಲು ಕಾರಣರಾದ ಎಲ್ಲಾ ಪಾಲುದಾರರಿಗೆ ಅವರು ನಿರಂತರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *