
ಬೆಂಗಳೂರು,ಮಾ.26:ಒAದನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಜೂನ್ 1ಕ್ಕೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಈ ಬಾರಿ 60 ದಿನಗಳ ರಿಯಾಯಿತಿ ನೀಡಲಾಗಿದೆ. ಅಂದರೆ, ನಿಗದಿತ ದಿನಾಂಕಕ್ಕೆ ಎರಡು ತಿಂಗಳು ಬಾಕಿ ಇರುವ ಮಕ್ಕಳಿಗೂ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.
ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸಚಿವರು, ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅನ್ವಯ, ಪೋಷಕರ ಹಿತದೃಷ್ಟಿಯಿಂದ 2026-27ನೇ ಸಾಲಿನಲ್ಲಿ ಈ ವಿನಾಯಿತಿ ಅನ್ವಯವಾಗಲಿದೆ ಎಂದು ತಿಳಿಸಿದರು. ಶಾಲಾ ದಾಖಲಾತಿಗಾಗಿ ಬಳಸುವ ತಂತ್ರಾAಶದಲ್ಲಿ ಈ ಬದಲಾವಣೆಯನ್ನು ತಕ್ಷಣವೇ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,ಇದರಿಂದ ತಾಂತ್ರಿಕ ತೊಂದರೆಯಿಲ್ಲದೆ ಮಕ್ಕಳು ಶಾಲೆಗೆ ಸೇರಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಕೆಲವು ವರ್ಷಗಳಿಂದ ವಯಸ್ಸಿನ ಮಿತಿಯ ವಿಚಾರವಾಗಿ ಪೋಷಕರಲ್ಲಿ ಭಾರಿ ಆತಂಕವಿತ್ತು. ಹಲವು ಮಕ್ಕಳ ವಯಸ್ಸು ಕೇವಲ ಕೆಲವು ದಿನಗಳ ಅಂತರದಲ್ಲಿ 6 ವರ್ಷಕ್ಕೆ ಕಡಿಮೆ ಇರುತ್ತಿತ್ತು. ಇದರಿಂದ ಮಕ್ಕಳ ಒಂದು ವರ್ಷ ವ್ಯರ್ಥವಾಗುತ್ತದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಮನವಿಗೆ ಸ್ಪಂದಿಸಿರುವ ಸರ್ಕಾರ, ಈ ವರ್ಷವೂ ರಿಯಾಯಿತಿ ಮುಂದುವರಿಸಲು ನಿರ್ಧರಿಸಿದೆ.















.
.
.
.
.
.
.
.
.
.
