
ಕಾರ್ಕಳ, ಮಾ.28: ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ಭತ್ತದ ಗದ್ದೆಯಲ್ಲಿ ಬೈಹುಲ್ಲಿನ ಪಿಂಡಿ ಮಾಡುತ್ತಿದ್ದ ವೇಳೆ ಚಾಲಕ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಯರ್ಲಪಾಡಿ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಸುಂದರ ಪೂಜಾರಿ ಅವರ ಗದ್ದೆಯಲ್ಲಿ ಶುಕ್ರವಾರ (ಮಾ. 27) ಶ್ರೀಧರ ಎಂಬವರು ಟ್ರ್ಯಾಕ್ಟರ್ ನಲ್ಲಿ ಬೈಹುಲ್ಲಿನ ಪಿಂಡಿ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















.
.
.
.
.
.
.
.
.
.
