
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟವಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯವು ದಾಖಲೆಯ ಮಟ್ಟದ ಫಲಿತಾಂಶ ಕಂಡಿದ್ದು, ಒಟ್ಟು ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ.12.5ರಷ್ಟು ಏರಿಕೆ ಕಂಡುಬಂದಿರುವುದು ವಿಶೇಷ.ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಔಟ್ ಆಫ್ ಔಟ್ ಅಂದರೆ 600ಕ್ಕೆ 600 ಅಂಕ ಪಡೆದು ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ.
2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ.
ವಾಣಿಜ್ಯ ವಿಭಾಗದ ಟಾಪರ್ :
ದಿಶಾ – 600 ಅಂಕ (ದಕ್ಷಿಣ ಕನ್ನಡದ ಆಳ್ವಾಸ್ ಕಾಲೇಜು)
ಅದಿತಿ ಬಾಪು – 600 ಅಂಕ (ಜೈನ್ ಕಾಲೇಜು, ಬೆಂಗಳೂರು)
ಕಲಾ ವಿಭಾಗದ ಟಾಪರ್: ಅರ್ಚನಾ, ಸಂಗೀತಾ – 598 ಅಂಕ (ಕೊಟ್ಟೂರಿನ ಇಂದೂ ಪಿಯು ಕಾಲೇಜು)
ವಿಜ್ಞಾನ ವಿಭಾಗದಲ್ಲಿ ಟಾಪರ್ : ಶಮನ್ಯು ಎಸ್ ಶೆಟ್ಟಿ, ನಂದನ್ ನಾಯಕ್ – 598 ಅಂಕ (ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು)
ವೈಷ್ಣವಿ, ಅನರ್ವಿ -597 (ಕಾರ್ಕಳದ ಜ್ಞಾನಸುಧಾ ಪಿಯು )
















.
.
.
.
.
.
.
.
.
.
