
ಕಾರ್ಕಳ, ಏ.09: ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಾರ್ಕಳದ ಕಾಲೇಜು ಶೇ.98% ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಎಲ್ಲಾ 44 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 100% ಫಲಿತಾಂಶ ಲಭಿಸಿದ್ದು. ವಾಣಿಜ್ಯ ವಿಭಾಗದಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 98% ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದ 44 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ವಾಣಿಜ್ಯ ವಿಭಾಗದ 53 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಒಟ್ಟು 97 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ,ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.. ಗಣಿತದಲ್ಲಿ 4 ವಿದ್ಯಾರ್ಥಿಗಳು 100ಅಂಕಗಳನ್ನು ಪಡೆದಿದ್ದರೆ, ವ್ಯವಹಾರ ಅಧ್ಯಾಯನದಲ್ಲಿ 3 ವಿದ್ಯಾರ್ಥಿಗಳು 100ಅಂಕಗಳನ್ನು ಪಡೆದಿದ್ದು, ಗಣಕ ವಿಜ್ಞಾನದಲ್ಲಿ 2,ಕನ್ನಡದಲ್ಲಿ 1, ಲೆಕ್ಕ ಶಾಸ್ತçದಲ್ಲಿ 1 ಹಾಗೂ ಹಿಂದಿಯಲ್ಲಿ ತಲಾ 1 ವಿದ್ಯಾರ್ಥಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆದ ದೀಕ್ಷಾ ಆಚಾರ್ಯ ಸಂಸ್ಥೆಗೆ ಪ್ರಥಮ ಸ್ಥಾನಿಯಾದರೆ 581 ಅಂಕ ಪಡೆದ ಹರ್ಷಿತ ಹೆಚ್ ಕಿಣಿ ಸಂಸ್ಥೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನವೀನ್ ಬಿ ನಾಯಕ್ 586 ಅಂಕಗಳನ್ನು ಪಡೆದುಸಂಸ್ಥೆಗೆ ಪ್ರಥಮ ಸ್ಥಾನದಲ್ಲಿದ್ದರೆ, 585 ಅಂಕಗಳನ್ನು ಪಡೆದ ಸಮೀಕ್ಷಾ ಮೊಯ್ಲಿ ಮತ್ತು ಐಫಾ ನಿಧಾ ದ್ವಿತೀಯ ಸ್ಥಾನಿಯಾಗಿದ್ದಾರೆ.
ಫಲಿತಾಂಶದಲ್ಲಿಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಸಂಸ್ಥೆಯ ಅಧ್ಯಕ್ಷ ಕೆ,ಎಸ್.ಇಮ್ತಿಯಾಜ್‌ಅಹಮ್ಮದ್‌ರವರು ಅಭಿನಂದಿಸಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ಕೆ. ಬಾಲಕೃಷ್ಣರಾವ್ ಉತ್ತಮ ಫಲಿತಾಂಶ ತಂದು ಕೊಟ್ಟಿರುವ ವಿದ್ಯಾರ್ಥಿಗಳನ್ನು ಮತ್ತು ಫಲಿತಾಂಶವನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿರುವ ಉಪನ್ಯಾಸಕ ವೃಂದವನ್ನು ಅಭಿನಂದಿಸಿದ್ದಾರೆ.
















.
.
.
.
.
.
.
.
.
.
