
ಕಾರ್ಕಳ,ಏ.11: ಅಜೆಕಾರು ಪದ್ಮನಗರದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಿಂದ ನಿರ್ಮಾಣಗೊಂಡಿರುವ ನೂತನ ಶಿಲಾಮಯ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹೊರೆಕಾಣಿಕೆ ಹಾಗೂ ಗಣಪತಿ ವಿಗ್ರಹದ ಮೆರವಣಿಗೆ ಸಂಭ್ರಮದಿಂದ ನೆರವೇರಿತು.
ಮೆರವಣಿಗೆಗೆ ಉದ್ಯಮಿ ಅಜೆಕಾರು ಶಿವರಾಮ ಜಿ ಶೆಟ್ಟಿ ಚಾಲನೆ ನೀಡಿದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹಾಗೂ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಸಂಸ್ಥಾಪಕ ಸುಧಾಕರ್ ಶೆಟ್ಟಿ, ಅರುಣ್ ಭಟ್ ಎಣ್ಣೆಹೊಳೆ ಸಾಥ್ ನೀಡಿದರು.

ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಕೇರಳದ ಚೆಂಡೆ ವಾದ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ಅಷ್ಟೇ ಅಲ್ಲದೆ ವಿವಿಧ ಭಜನಾ ಮಂಡಳಿಗಳು, ಕಾಲೇಜು ವಿದ್ಯಾರ್ಥಿಗಳು, ಎನ್ಸಿಸಿ ವಿದ್ಯಾರ್ಥಿಗಳು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
ನಾಳೆ (ಏ.12ರಂದು) ಮಹಾಗಣಪತಿ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ.ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.
















.
.
.
.
.
.
.
.
.
.
