
ಕಾರ್ಕಳ, ಏ.11: ಕ್ರಶರ್ ಘಟಕದಲ್ಲಿ ಎಂ ಸ್ಯಾಂಡ್ ತುಂಬಿಸುವ ವಿಚಾರದಲ್ಲಿ ಟಿಪ್ಪರ್ ಚಾಲಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡ ಘಟನೆ ಸೂಡದ ಓರಿಯಂಟಲ್ ಕ್ರಶರ್ ನಲ್ಲಿ ನಡೆದಿದೆ.
ಏ 10 ರಂದು ಶುಕ್ರವಾರ ಬೆಳಗ್ಗೆ ಟಿಪ್ಪರ್ ಚಾಲಕ ಕನಕ ಎಂಬವರು ತನ್ನ ಲಾರಿಗೆ ಎಂ.ಸ್ಯಾAಡ್ ತುಂಬಿಸಲು ಬಂದಿದ್ದರು.ಕಚೇರಿಯಿAದ 10 ನಂಬರ್ ಟೋಕನ್ ಪಡೆದು ತನ್ನ ಲಾರಿ ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು.ಮೊದಲು ಮೂರು ಲಾರಿಗಳು ಲೋಡಿಂಗ್ ಆಗಿ ಹೊರಟಾಗ ಬೇರೆ ಲಾರಿ ಇಲ್ಲದ ಕಾರಣದಿಂದ ಕನಕ ಎಂ ಸ್ಯಾಂಡ್ ತುಂಬಿಸಲು ತನ್ನ ಲಾರಿ ನಿಲ್ಲಿಸಿದಾಗ, 2ನೇ ನಂಬರ್ ಟೋಕನ್ ಪಡೆದ ಹರೀಶ್ ಎಂಬಾತ ಅಲ್ಲಿಗೆ ಬಂದು ತನ್ನ ಟೊಕನ್ ಗಿಂತ ಮೊದಲು ನೀನು ಲೋಡ್ ಮಾಡುತ್ತಿದ್ದೀಯಾ ಎಂದು ಆಕ್ಷೇಪಿಸಿ ತನ್ನ ಟಿಪ್ಪರ್ ಮಾಲಕರಿಗೆ ಕರೆ ಮಾಡಿದಾಗ ಆತನನ್ನು ಹೊದಬ್ಬುವಂತೆ ಹೇಳಿದಾಗ ಏಕಾಎಕಿ ಹರೀಶ್ ಚಾಲಕನ ಸೀಟಿನಲ್ಲಿ ಕುಳಿತಿದ್ದ ಕನಕ ಎಂಬವರನ್ನು ಸೀಟಿನಿಂದ ಹೊರಗೆಳೆದು ಎದೆ,ಮುಖ, ಕೆನ್ನೆಗೆ ಗುದ್ದಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಕನಕ ಅವರು ಹರೀಶ್ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
















.
.
.
.
.
.
.
.
.
.
