
ಕಾರ್ಕಳ, ಏ. 11:ಪುತ್ತೂರು ತಾಲೂಕಿನ ನೆಲ್ಯಾಡಿಯ ನವ ವಿವಾಹಿತ ಸುದೀಪ್ ರೈ ಸಾವಿನ ಪ್ರಕರಣದಲ್ಲಿ ಇದೀಗ ಆತನ ಪತ್ನಿ ಸೌಮ್ಯ ಶೆಟ್ಟಿಯನ್ನು ಪ್ರಬಲ ಸಾಕ್ಷ್ಯಾಧಾರದ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುದೀಪ್ ರೈ ಅವರು ಪತ್ನಿ ಸೌಮ್ಯ ಶೆಟ್ಟಿಯ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ದಾಮೋದರ ಶೆಟ್ಟಿ ಆರೋಪಿಸಿದ್ದರು.
ಉದ್ಯಮಿ ಸುದೀಪ್ ರೈ ಅವರನ್ನು ಅವರ ಆಸ್ತಿಯ ಆಸೆಗೆ ಸೌಮ್ಯ ಶೆಟ್ಟಿ ಮದುವೆಯಾಗಿದ್ದಳು ಎಂದು ಆತನ ಪೋಷಕರು ಆರೋಪವಾಗಿದೆ. ಹಣದಾಸೆಗೆ ಮಗನನ್ನು ಬಲಿ ಪಡೆದಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪೂರಕ ಎಂಬಂತೆ ಆಕೆ ಕಿರುಕುಳ ಕೊಡುತ್ತಿದ್ದ ಕುರಿತು ಪೊಲೀಸರಿಗೆ ಸಾಕ್ಷ್ಯ ದೊರೆತಿದೆ ಎನ್ನಲಾಗಿದ್ದು, ಈ ಆಧಾರದಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
















.
.
.
.
.
.
.
.
.
.
