
ಹಾಸನ, ಏ.13: ಪ್ರೀತಿ, ಮೋಹ, ಕಾಮ ಎನ್ನುವ ಮಾಯೆ ಎಂತಹ ಕೆಲಸವನ್ನಾದರೂ ಮಾಡಿಸುತ್ತದೆ ಎನ್ನವುದಕ್ಕೆ ಹಾಸನ ಜಿಲ್ಲೆಯಲ್ಲಿ ಗೊರೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಬರೋಬ್ಬರಿ ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಎಳೆಯ ಮಗುವನ್ನು ತೊರೆದು ತನ್ನ ಹಳೇ ಪ್ರೇಮಿಯ ಜೊತೆ ರಾತ್ರೋರಾತ್ರಿ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿದ್ದಾಳೆ.
ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರ ಜೊತೆ ಪರಾರಿಯಾದ ಮಹಿಳೆಗೆ 8 ವರ್ಷಗಳ ಹಿಂದೆಯೇ ಸಂಬAಧಿಕರೊಬ್ಬರ ಜೊತೆ ವಿವಾಹವಾಗಿತ್ತು. ದಾಂಪತ್ಯ ಜೀವನ ಚೆನ್ನಾಗಿಯೇ ಇದ್ದರೂ, ಈಕೆಗೆ ಮದುವೆಗೂ ಮುನ್ನ ಯುವಕನ ಜೊತೆ ಪ್ರೀತಿ ಇತ್ತು ಎನ್ನಲಾಗಿದೆ. ಇತ್ತೀಚೆಗೆ ಮಹಿಳೆಗೆ ತನ್ನ ಹಳೆಯ ಲವರ್ ಜೊತೆ ಸಂಪರ್ಕ ಬೆಳೆದು ಮತ್ತೆ ಇವರಿಬ್ಬರ ಲವ್ವಿಡವ್ವಿ ಶುರುವಾಗಿದೆ.
ಸಾಂತ್ವನ ಕೇಂದ್ರದಲ್ಲಿ ಪತ್ನಿಯ ನಾಟಕ:
ಗಂಡ ಹೆಂಡತಿ ಮಧ್ಯೆಯ ಪ್ರಿಯಕರನ ಎಂಟ್ರಿ ಆಗುತ್ತಿದ್ದಂತೆಯೇ ಇವರ ನಡುವೆ ಕೌಟುಂಬಿಕ ಕಲಹ ಶುರುವಾಗಿ ಈ ಪ್ರಕರಣ ಪೊಲೀಸರ ಮೆಟ್ಟಿಲೇರಿತ್ತು. ಬಳಿಕ ಕುಟುಂಬಸ್ಥರು ಮತ್ತು ಪೊಲೀಸರು ಸಂಧಾನ ನಡೆಸಿ, ಮಹಿಳೆಗೆ ತಿಳಿಹೇಳಿದ್ದರು. ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೂ ದಾಖಲಿಸಿದ್ದರು. ಆ ಸಮಯದಲ್ಲಿ ನಾನು ಪತಿಯ ಜೊತೆಯೇ ಇರುತ್ತೇನೆ ಎಂದು ನಂಬಿಸಿದ ಮಹಿಳೆ, ಮನೆಗೆ ಮರಳಿದ ಬೆನ್ನಲ್ಲೇ ತನ್ನ ಲವರ್ ಜೊತೆ ರಾತ್ರೋರಾತ್ರಿ ಓಡಿಹೋಗಿ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಿದ್ದಾಳೆ. ಚಲಿಸುವ ಕಾರಿನಲ್ಲೇ ಪ್ರಿಯಕರ ಮಹಿಳೆಗೆ ತಾಳಿ ಕಟ್ಟಿ, ಕಾಲಿಗೆ ಕಾಲುಂಗರ ತೊಡಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದಿದ್ದರೂ ತನ್ನ ಹಳೆ ಚಾಳಿ ಬಿಡದ ಮಹಿಳೆ ಮನೆಯವರನ್ನು ನಂಬಿಸಿ ಪ್ರಿಯಕರನ ಜೊತೆ ಓಡಿ ಹೋಗಿರುವುದು ಪತಿ ಮತ್ತು ಆಕೆಯ ಕುಟುಂಬಸ್ಥರನ್ನು ಬೆಚ್ಚಿಬೀಳಿಸಿದೆ.

















.
.
.
.
.
.
.
.
.
.
