
ಕಾರ್ಕಳ,ಮೇ.18: ಕೃಷಿ ತೋಟಕ್ಕೆ ನೀರು ಬಿಡಲು ಹೋಗಿದ್ದ ವೇಳೆ ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕು ಬೋಳ ಗ್ರಾಮದ ಬಿಟ್ಟಿಂಗೇರಿ ಎಂಬಲ್ಲಿ ಭಾನುವಾರ (ಮೇ. 17) ನಡೆದಿದೆ.
ಬಿಟ್ಟಿಂಗೇರಿಯ ಅಜಿತ್ ಪ್ರಸಾದ್ ಹೆಗ್ಡೆ(73) ಎಂಬವರು ಭಾನುವಾರ ಬೆಳಗ್ಗೆ ತಮ್ಮ ಕೃಷಿ ತೋಟಕ್ಕೆ ನೀರು ಬಿಡಲು ಬಾವಿಯ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
