
ಬೆಂಗಳೂರು, ಜೂನ್ 11: ಕಳೆದ ಒಂದು ವರ್ಷದಿಂದ ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಎಡೆಮಾಡಿದ ಧರ್ಮಸ್ಥಳ ಬುರುಡೆ ಕೇಸ್ನ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಶತಾಯಗತಾಯ ಧರ್ಮಾಧಿಕಾರಿಗಳ ಹೆಸರು ಕೆಡಿಸಬೇಕು ಎಂದು ಬರೋಬ್ಬರಿ 200 ಕೋ.ರೂ ಫಂಡಿAಗ್ ಕೂಡ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿದೆ. ಧರ್ಮಸ್ಥಳದ ಮಂಜುನಾಥನ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಬುರುಡೆ ಗ್ಯಾಂಗ್ ಹೆಣೆದ ಷಡ್ಯಂತ್ರದ ರಹಸ್ಯವನ್ನು ಚಿನ್ನಯ್ಯ ಬಿಚ್ಚಿಟ್ಟಿದ್ದಾನೆ. ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿರುವ ಬುರುಡೆ ಚಿನ್ನಯ್ಯ ತನ್ನ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿದ್ದು, ಪ್ರಕಾಶ್ ರಾಜ್ ಮಾತನಾಡಿರುವ ಸಂಗತಿಯನ್ನು ಉಲ್ಲೇಖಿಸಿದ್ದಾನೆ.
ಗಿರೀಶ್ ಮಟ್ಟಣ್ಣವರ್ ನಟ ಪ್ರಕಾಶ್ ರಾಜ್ ಅವರಿಗೆ ಮೊಬೈಲ್ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಅವರು ಏನು ಹೇಳಬೇಕೆಂದು ಸೂಚಿಸಿದ್ದಾರೋ ಅದನ್ನು ಅಧಿಕಾರಿಗಳ ಮುಂದೆ ಹೇಳಬೇಕು. ಅವರು ಹೇಳಿದಂತೆ ಕೇಳಿದರೆ ಜೂನ್ 29 ರಂದು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿ ಚಿನ್ನಯ್ಯ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾನೆ. ಇದಲ್ಲದೇ ಈ ಷಡ್ಯಂತ್ರಕ್ಕಾಗಿ ಬರೋಬ್ಬರಿ 200 ಕೋಟಿ ವಹಿವಾಟು ಸಿದ್ಧಪಡಿಸಲಾಗಿತ್ತು ಎಂದು ಸ್ಫೋಟಕ ಸಂಗತಿಯನ್ನು ಉಲ್ಲೇಖಿಸಿದ್ದಾನೆ.
ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ ಮಾಡಿರೋದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಬಯಲಾಗಿದೆ. 200 ಕೋಟಿ ಬಜೆಟ್ ಇಟ್ಕೊಂಡು ಗ್ಯಾಂಗ್ ಷಡ್ಯಂತ್ರ ಮಾಡಿತ್ತು, ಷಡ್ಯಂತ್ರಕ್ಕೆ ಅಂತಾರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾನೆ. ನಮ್ಮ ಪ್ಲಾನ್ ಸಕ್ಸಸ್ ಆದ್ರೆ 50 ಲಕ್ಷ ಕೊಡ್ತೀನಿ ಅಂತಾ ಆಮಿಷ ಒಡ್ಡಿದ್ದರು ಎಂದು ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ, ಜಯಂತ್ ಷಡ್ಯಂತ್ರದ ನಿಜವಾದ ಆರೋಪಿಗಳ ಹೆಸರು ಹೇಳಿದ್ದರೂ ಎಸ್ಐಟಿ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 29ಕ್ಕೆ ಮುಂದೂಡಿದೆ.


.
.
.
.
.
.
.
.
.
.
.
.
.
.
.
.
.
.
.
.
