
ಕಾರ್ಕಳ, ಜೂ16: ಮರದಿಂದ ಬಿದ್ದು ಗಾಯಗೊಂಡಿದ್ದ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ನಿವಾಸಿ ಸುನೀಲ್ ಪೂಜಾರಿ(39) ಎಂಬವರು ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಸುನಿಲ್ ಮಾ.21 ರಂದು ಕೆಲಸ ಮಾಡುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡಿದ್ದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಏ.21 ರಂದು ಮನೆಗೆ ಬಂದಿದ್ದರು. ಆದರೂ ಗುಣಮುಖರಾಗದೆ ನಡೆದಾಡಲು ಆಗದೆ ಮನೆಯಲ್ಲಿಯೇ ಇದ್ದ ಅವರ ಆರೋಗ್ಯ ಕಳೆದ 10 ದಿನಗಳಿಂದ ಹದಗೆಟ್ಟಿತ್ತು. ಆದರೆ ಜೂ.15 ರಂದು ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಅವರು ಮರುದಿನ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
