
ಕಾರ್ಕಳ, ಜು.03: ಕಾರ್ಕಳ ತಾಲೂಕಿನ ಮುಡಾರು ಎಂಬಲ್ಲಿ ಯಾದಗಿರಿ ಮೂಲದ ಜೆಸಿಬಿ ಆಪರೇಟರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಯಾದಗಿರಿ ಮೂಲದ ಸಾಹೇಬಣ್ಣ (37)ಎಂಬವರು ಕಳೆದ 3 ವರ್ಷಗಳಿಂದ ಮುಡಾರುವಿನ ಪ್ರಶಾಂತ ಕುಮಾರ್ ಎಂಬವರಿಗೆ ಸೇರಿದ ಜೆಸಿಬಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಕಳೆದ 6 ತಿಂಗಳ ಹಿಂದೆ ಅವರಿಗೆ ಎದೆನೋವು ಬಂದಿದ್ದು ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಜು. 1 ರಂದು ಮತ್ತೆ ಎದೆನೋವು ಬಂದಿದ್ದು, ಮನೆಗೆ ಬಂದು ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆದಿದ್ದರು. ಆದರೆ ಇಂದು (ಜು. 03)ಮತ್ತೆ ಅವರಿಗೆ ಎದೆನೋವು ಕಾಣಿಸಿದ್ದು,ಜೆಸಿಬಿ ಮಾಲಕ ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆಗೆ ಸ್ಪಂದಿಸದ ಸಾಹೇಬಣ್ಣ ಅವರು ಮೃತಪಟ್ಟಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
