
ಕಾರ್ಕಳ, ಜು.,03:ಯುವಕನ ಪ್ರೀತಿಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಯುವಕನೊಬ್ಬ ವ್ಯಕ್ತಿಗೆ ದೊಣ್ಣೆಯಿಂದ ಹಲ್ಲೆಗೈದ ಘಟನೆ ಕಾರ್ಕಳ ತಾಲೂಕಿನ ಕೌಡೂರು ಕೆಪ್ಲಬೆಟ್ಟು ಎಂಬಲ್ಲಿ ನಡೆದಿದೆ.
ಕೊಲ್ಲೊಟ್ಟು ಗ್ರಾಮದ ಪ್ರಸಾದ್ ಶೆಟ್ಟಿ (46) ಎಂಬವರು ಹಲ್ಲೆಗೊಳಗಾದ ವ್ಯಕ್ತಿ.
ಮುಂಬಯಿ ಹೊಟೇಲ್ ಉದ್ಯಮಿ ಪ್ರಸಾದ್ ಶೆಟ್ಟಿ ತಂದೆಯ ಅನಾರೋಗ್ಯದ ಕಾರಣದಿಂದಾಗಿ ಅವರ ಚಿಕಿತ್ಸೆಗೆಂದು ಕಾರ್ಕಳದ ಕೌಡೂರಿಗೆ ಬಂದಿದ್ದರು.
ಅವರು ಜು.2 ರಂದು ಬೈಲೂರಿನ ಅರ್ಚನಾ ಬಾರ್ ನಲ್ಲಿ ಊಟ ಮಾಡಿ ತನ್ನ ಮನೆಯಾದ ಕೌಡೂರು ಕೆಪ್ಲಬೆಟ್ಟುವಿನ ಕಡೆ ಬೈಕಿನಲ್ಲಿ ಹೋಗುತ್ತಿರುವಾಗ ರಾತ್ರಿ ಸುಮಾರು 11ಗಂಟೆಗೆ ಕೌಡೂರು ಗ್ರಾಮದ ಕೆಪ್ಲಬೆಟ್ಟು ಮೋರಿಯ ಬಳಿ ರಸ್ತೆಯಲ್ಲಿ ನಿಂತು ತನ್ನ ಪರಿಚಯದ ಶೈಲು ಮತ್ತು ಪ್ರವೀಣ್ ಶೆಟ್ಟಿಯವರ ಜೊತೆಯಲ್ಲಿ ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದು ಯುವಕ ನನ್ನ ಸಂಬಂಧಿ ಹುಡುಗಿಯ ಪ್ರೀತಿಯ ವಿಚಾರದಲ್ಲಿ ನನಗೆ ಏಕೆ ಬೈದಿದ್ದೀರಿ ಎಂದು ಹೇಳಿ ಪ್ರಸಾದ್ ಅವರ ತಲೆಗೆ ಹಾಗೂ ಎಡಕೈಗೆ ದೊಣ್ಣೆಯಿಂದ ಹೊಡೆದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
