
ಕಾರ್ಕಳ,ಜೂ.27: ಕಾರ್ಕಳ ತಾಲೂಕು ಕಸಬಾ ಗ್ರಾಮದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಸಬಾ ಗ್ರಾಮದ ಪೆರ್ವಾಜೆ ರೋಡ್ ನಿವಾಸಿ ಸುಂದರ ಮೊಯಿಲಿ ಎಂಬವರು (75 ವ) ಎಂಬವರು ಕೆ. ಇ.ಬಿ ಯಲ್ಲಿ ಲೈನ್ ಮ್ಯಾನ್ ಕೆಲಸ ಮಾಡಿ ನಿವೃತ್ತ ಜೀವನ ನಡೆಸಿಕೊಂಡಿದ್ದು ಸುಮಾರು 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಅರ್ಕುಳ ಎಂಬಲ್ಲಿರುವ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಔಷಧಿ ಪಡೆಯುತ್ತಿದ್ದರೂ ಅವರ ಕಾಯಿಲೆ ಗುಣಮುಖವಾಗಿರಲಿಲ್ಲ. ಇದೇ ಕಾರಣಕ್ಕೆ ಮನನೊಂದು ಶನಿವಾರ (ಜೂ.27) ಮನೆಯ ಅಂಗಳಕ್ಕೆ ಅಳವಡಿಸಿದ ಶೀಟ್ ನ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
