
ಕಾರ್ಕಳ,ಜು.05: ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಮಿತಿಮೀರಿದ್ದು, ಜಲ್ಲಿ, ಕಲ್ಲು ಸಾಗಾಟದ ಭಾರೀ ವಾಹನಗಳ ಓಡಾಟದಿಂದ ಕಲ್ಯಾ ಕೈರಬೆಟ್ಟು ಪರಿಶಿಷ್ಟ ಪಂಗಡ ಕಾಲೋನಿಯನ್ನು ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಬಹುತೇಕ ಹಾನಿಯಾಗಿ ಜನರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕೈರಬೆಟ್ಟು ಪ್ರದೇಶದಲ್ಲಿ ಸುಮಾರು 40ಕ್ಕೂ ಅಧಿಕ ಪರಿಶಿಷ್ಟ ಪಂಗಡದ ಮರಾಠಿ ಸಮುದಾಯದ ಮನೆಗಳು ಹಾಗೂ ಇತರ ಕುಟುಂಬಗಳು ವಾಸ ಮಾಡುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದ ಈ ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಉತ್ಪನ್ನಗಳನ್ನು ಸಾಗಿಸುವ ಘನ ವಾಹನಗಳ ನಿತ್ಯ ಓಡಾಟದಿಂದ ಕಾಂಕ್ರೀಟ್ ರಸ್ತೆಯು ಬಿರುಕು ಬಿಟ್ಟಿದೆ,ಮಾತ್ರವಲ್ಲದೇ ಸಂಪರ್ಕ ರಸ್ತೆಯ ಮೋರಿ ಕುಸಿದು ಹಾನಿಗೀಡಾಗಿದೆ.
ಕಲ್ಯಾ ಕೈರಬೆಟ್ಟು ಗಣಿಗಾರಿಕೆ ನಡೆಯುವ 100 ಮೀಟರ್ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯಿದ್ದು ಇದರಿಂದಾಗಿ ಶಾಲಾ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ.ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಗಣಿಗಾರಿಕೆ ಅಧಿಕಾರಿಗಳು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಗಣಿಗಾರಿಕೆಯ ಹಾನಿ ಕುರಿತು ಪರಿಶೀಲನೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
